

ಕೊಳ್ಳೇಗಾಲ : ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಪಟ್ಟಣದ ಖಾಸಗಿ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ರಕ್ಷಿಸಿ, ಆರು ಜನ ಪುರುಷರನ್ನು ವಶಕ್ಕೆ ಪಡೆದಿದ್ದಾರೆ.
ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ, ಅಪರಾಧ ಪತ್ತೆ ದಳ, ಪೊಲೀಸ್ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ಸಿಬ್ಬಂದಿ ಲಾಡ್ಜ್ ಮೇಲೆ ದಾಳಿ ನಡೆಸಿದರು. ಈ ವೇಳೆ ನಾಲ್ವರು ಮಹಿಳೆಯರನ್ನು ರಕ್ಷಿಸಿ, ನಾಲ್ವರು ಪುರುಷರು, ಇಬ್ಬರು ಲಾಡ್ಜ್ ನೋಡಿಕೊಳ್ಳುತ್ತಿದ್ದ ಪುರುಷ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಸಿಲುಕಿದ್ದವರು ಸ್ಥಳೀಯರಾಗಿದ್ದು, ಒಬ್ಬ ಮಹಿಳೆ ಹೊರ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ ಪಟ್ಟಣ ಪಿಸ್ಸೈ ವರ್ಷಾ, ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ, ಅಪರಾಧ ಪತ್ತೆ ದಳದ ಎಎಸ್ಸೈ ತಖೀವುಲ್ಲಾ, ಹೆಡ್ ಕಾನ್ಸ್‌ಟೇಬಲ್ ರವಿ, ಕಿಶೋರ್, ವೆಂಕಟೇಶ್, ಕಾನ್ಸ್ ಟೇಬಲ್ ಶಿವಕುಮಾರ್, ಬಿಳಿಗೌಡ, ಪಟ್ಟಣ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೂರ್ಯ ಪ್ರಕಾಶ್, ವಸಂತ, ರಾಧ, ಯಶೋದಮ್ಮ, ಪಡಿಯಪ್ಪ ಇದ್ದರು.