ವೇಮನರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ

19.HBH.2
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ಹಾಗೂ ರೆಡ್ಡಿ ಸಮುದಾಯದಿಂದ ಭಾನುವಾರ ವೇಮನ ಜಯಂತಿ ಆಚರಿಸಲಾಯಿತು.

ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿದ ರೆಡ್ಡಿ ಸಮುದಾಯದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಆರ್.ಕೇಶವರೆಡ್ಡಿ, 15ನೇ ಶತಮಾನದ ಜನಸಾಮಾನ್ಯರ ಕವಿಯಾಗಿದ್ದ ಯೋಗಿ ವೇಮನರು ಜಾತಿಯತೆಯ ಅಂಧಕಾರದ ವಿರುದ್ಧ ಕಾವ್ಯಗಳನ್ನು ರಚಿಸುವ ಮೂಲಕ ಜನರಿಗೆ ಹತ್ತಿರವಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸಮಾಜ ಸ್ಛಚ್ಛಂದದಿಂದ ಕೂಡಿರುತ್ತೆ ಎಂದರು.

ತಾಲೂಕು ಅಧ್ಯಕ್ಷ ಮೆಡಿಕಲ್ ಬಸವರಾಜ ರೆಡ್ಡಿ ಮಾತನಾಡಿ, ಸಾಹಿತಿ ವೇಮನ ಸರಳವಾದ ರೀತಿಯಲ್ಲಿ, ಜನರಿಗೆ ಅರ್ಥವಾಗುವಂತೆ ಕವನಗಳ ಮೂಲಕ ಸಮಾಜದಲ್ಲಿದ್ದ ತಾರತಮ್ಯಗಳನ್ನು ಹೋಗಲಾಡಿಸಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ವೇಮನ ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಗದ್ದಿಕೆರೆ ಡಾ.ಬಸವರಾಜ್ ರೆಡ್ಡಿ ವೇಮನರ ಬಗ್ಗೆ ಉಪನ್ಯಾಸ ನೀಡಿದರು.

ಸಮುದಾಯದ ಪ್ರಮುಖರಾದ ಬನ್ನಿಗೋಳ ವೆಂಕಣ್ಣ, ಗದ್ದಿಕೆರೆ ಶಿವರೆಡ್ಡಿ, ಬಸವರೆಡ್ಡಿ, ತಿಪ್ಪಾರೆಡ್ಡಿ, ಅಡಿವೆಪ್ಪ, ಟಿ.ಮಂಜುನಾಥ ರೆಡ್ಡಿ, ಬನ್ನಿಗೋಳ ಆನಂದ ರೆಡ್ಡಿ, ಮೈನಳ್ಳಿ ಕೊಟ್ರೇಶಪ್ಪ, ಶಿಕ್ಷಕ ಹನುಮರೆಡ್ಡಿ, ಜೆಸ್ಕಾಂ ಜೆಇ ಹೇಮರೆಡ್ಡಿ, ನಿವೃತ್ತ ಶಿಕ್ಷಕ ಪಂಚಪ್ಪ, ಸಿಬ್ಬಂದಿಯವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net