

ಚಿಕ್ಕಮಗಳೂರು: ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಹೊರ ರೋಗಿಗಳ ವಿಭಾಗದ ಕಟ್ಟಡದ ಉದ್ಘಾಟನಾ ಸಮಾರಂಭ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾದ ಘಟನೆ ಸೋಮವಾರ ನಡೆಯಿತು.
ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಗಳ ನಾಯಕರ ಪರ ಘೋಷಣೆ ಹಾಕುವ ಮೂಲಕ ಸರ್ಕಾರಿ ಕಾರ್ಯಕ್ರಮವನ್ನು ಹೈಜಾಕ್ ಮಾಡಿದರು. ಕಟ್ಟಡದ ಉದ್ಘಾಟನೆಗೂ ಮುನ್ನ ಆಸ್ಪತ್ರೆಯ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಕುಳಿತು ಬಿಜೆಪಿ ಕಾರ್ಯಕರ್ತರು ಗ್ರೂಫ್ ಪೋಟೋ ತೆಗೆಸಿಕೊಂಡರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಆಸಿನರಾಗಿದ್ದರು.
ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್, ಶಾಸಕರಾದ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ ಜಿಲ್ಲಾ ಆಸ್ಪತ್ರೆಗೆ ಬರುವ ಮೊದಲೇ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಬರುತ್ತಿದ್ದಂತೆ ಅವರ ಪಕ್ಷದ ಕಾರ್ಯಕರ್ತರು ಜೈಕಾರ ಹಾಕಿದರು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಅವರು ಬರುತ್ತಿದ್ದಂತೆ ನೂತನ ಕಟ್ಟಡದ ಮೆಟ್ಟಿಲುಗಳ ಮೇಲೆ ಕಾರ್ಯಕರ್ತರು ಕುಳಿತುಕೊಂಡು ಪೋಟೋ ತೆಗೆಸಿಕೊಂಡರು.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಬಂದು ಕಟ್ಟಡ ಉದ್ಘಾಟಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಿ.ಟಿ. ರವಿ ಅವರಿಗೆ ಜೈಕಾರ ಹಾಕಿದರು. ಆಗ ಸ್ಥಳದಲ್ಲಿಯೇ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಸಚಿವ ಕೆ.ಜೆ.ಜಾರ್ಜ್ ಪರ ಘೋಷಣೆ ಕೂಗಿದರು.
ವೇದಿಕೆ ಕಾರ್ಯಕ್ರಮದ ವೇಳೆಯಲ್ಲೂ ಉಭಯ ನಾಯಕರ ಕಾರ್ಯಕರ್ತರು ಜೈ ಹಾರ ಮುಂದುವರೆಸಿದರು. ಅಧ್ಯಕ್ಷೀಯ ಭಾಷಣವನ್ನು ಶಾಸಕ ಎಚ್.ಡಿ. ತಮ್ಮಯ್ಯ ಅವರು ಮುಗಿಸುತ್ತಿದ್ದಂತೆ ಸಿ.ಟಿ. ರವಿ ವೇದಿಕೆಯಿಂದ ಹೊರಗೆ ನಡೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಿ.ಟಿ. ರವಿ ಅವರನ್ನು ಮೇಲೆತ್ತಿ ಜೈಕಾರ ಹಾಕಿದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಎಚ್.ಡಿ.ತಮ್ಮಯ್ಯ ಅವರನ್ನು ಮೇಲಕ್ಕೆ ಎತ್ತಿ ಜೈಕಾರ ಹಾಕಿದ್ದು ವಿಶೇಷವಾಗಿತ್ತು.
ಸಿ.ಟಿ. ರವಿ ಹೇಳಿz್ದೆÃನು?
ಯಾವುದೇ ಕ್ಷೇತ್ರ ಇರಲಿ, ಅಲ್ಲಿ ಹೆಜ್ಜೆ ಗುರುತು ಬಿಟ್ಟು ಹೋಗಬೇಕು. ಹಾಗಾಗಿ ನನ್ನ ಅವಧಿಯಲ್ಲಿ ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು, ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಕಟ್ಟಡ, ನ್ಯಾಯಾಲಯದ ಕಟ್ಟಡ, ಜಿಲ್ಲಾಸ್ಪತ್ರೆಯ ಹೊರ ರೋಗಿಗಳ ಕಟ್ಟಡ ಹೀಗೆ ಹಲವು ಅಭಿವೃದ್ಧಿ ಕೆಲಸ ಮಾಡಿz್ದÉÃನೆ ಎಂದು ಸಿ.ಟಿ.ರವಿ ತಿಳಿಸಿದರು.
ಬಸವನಹಳ್ಳಿ ಕೆರೆ ಚಿಕ್ಕಮಗಳೂರಿನ ಹೆಬ್ಬಾಗಿಲು. ಈ ಕೆರೆಯ ಅಭಿವೃದ್ಧಿ ಬಗ್ಗೆ ಅಪಪ್ರಚಾರ ಹಾಗೂ ಸತ್ಯಕ್ಕೆ ದೂರವಾದ ಆರೋಪ ಮಾಡಿದರು. ಹೊಟ್ಟೆ ಕಿಚ್ಚಿನಿಂದ ಕಾಮಗಾರಿ ತಡೆ ಹಿಡಿದರು. ಆ ಕಾಮಗಾರಿಗೆ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಹೀಗಿರುವಾಗ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಈ ಕೆರೆ ಇರುವುದರಿಂದ ಅಭಿವೃದ್ಧಿಯಾಗಬೇಕು. ತಡೆ ಹಿಡಿದಿರುವ ಕಾಮಗಾರಿಗೆ ಚಾಲನೆ ನೀಡಬೇಕು. ಚಿಕ್ಕಮಗಳೂರಿಗೆ ಅನ್ಯಾಯ ಆಗಬಾರದು ಎಂದು ಹೇಳಿದರು.
ಎಚ್.ಡಿ . ತಮ್ಮಯ್ಯ ಹೇಳಿz್ದÉÃನು?
ಯಾವುದೇ ವ್ಯಕ್ತಿ ಇರಲೀ ಆತನ ನಡವಳಿಕೆ ಚೆನ್ನಾಗಿರಬೇಕು. ಇದು ಪ್ರಮುಖವಾಗಿ ರಾಜಕೀಯದಲ್ಲಿರುವ ಜನಪ್ರತಿನಿಧಿಗೆ ಇರಬೇಕು. ನಾನು ಯಾವತ್ತೂ ಜಾತಿ, ಪಕ್ಷಬೇಧ ಮಾಡಿಲ್ಲ. ಅಸೂಹೆ, ಹೊಟ್ಟೆ ಕಿಚ್ಚಿಗೆ ಔಷಧ ಇಲ್ಲ. ಅದನ್ನು ಕಂಡು ಹಿಡಿಯಲೂ ಸಹ ಆಗಿಲ್ಲ. ಹಾಗಾಗಿ ಅಸೂಹೆ ಪಡುವವರಿಗೆ ಹೊಟ್ಟೆಕಿಚ್ಚು ಮಾಡುವವರ ಬಗ್ಗೆ ಗಮನ ಹರಿಸುವುದಿಲ್ಲ. ಈಗಾಗಲೇ ಪ್ರಾರಂಭವಾಗಿರುವ ಕಾಮಗಾರಿಗಳನ್ನು ಮುಗಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಬಸವನಹಳ್ಳಿ ಕೆರೆ ಕಾಮಗಾರಿಯನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ನಾನು ಪತ್ರ ಕೊಟ್ಟಿಲ್ಲ. ತಡೆ ಹಿಡಿದಿಲ್ಲ. ವಿಧಾನ ಪರಿಷತ್ ಸದಸ್ಯರು ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಅಕ್ರಮ ಆಗಿದೆ ಎಂದು ಹೇಳಿದ ಕಾರಣಕ್ಕಾಗಿ ತಡೆ ಹಿಡಿಯಲಾಗಿದೆ. ಇಂತಹ ಕಾಮಗಾರಿಯ ವಿಷಯದಲ್ಲಿ ನಿಮ್ಮ ಜತೆ ಕೈ ಜೋಡಿಸುತ್ತೇವೆ ಎಂದರು.
ನಾನು ಈ ಕ್ಷೇತ್ರದ ಶಾಸಕನಾಗಿ ಎರಡು ವರ್ಷ ಕಳೆದಿದೆ. ಕೆಲವರು ಈ ಕ್ಷೇತ್ರದ ಕೆಲವು ರಸ್ತೆಗಳ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಟೀಕೆ ಮಾಡುತ್ತಿದ್ದಾರೆ. ಯಾವುದೇ ಪದವಿ ಮುಗಿಸಬೇಕಾದರೆ ೩ ವರ್ಷ ಬೇಕು. ಎಂಬಿಬಿಎಸ್ ಮುಗಿಸಬೇಕಾದರೆ ೫ ವರ್ಷ ಬೇಕು. ನಾನು ಎಂಎಲ್‌ಎ ಆಗಿ ಎರಡೇ ವರ್ಷ ಆಗಿದೆ. ಇನ್ನು ೩ ವರ್ಷ ಇದೆ. ನನ್ನ ಅವಧಿಯಲ್ಲಿ ಒಂದಲ್ಲಾ, ಎರಡಲ್ಲಾ ನೂರು ರಸ್ತೆಗಳನ್ನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.