ವೇದಿಕೆಗೆ ಎಡವೆ, ಹೇಡೆ ಆಯ್ಕೆ

Karave Padadhikarigal Aayke photo
Published on

ಬೀದರ್: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ರಾಜು ಎಡವೆ ಹಾಗೂ ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅನಿಲ್ ಹೇಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಔರಾದ್‍ನಲ್ಲಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕರ್ತರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ನೂತನ ಪದಾಧಿಕಾರಿಗಳು ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಧೋಳ ಸೂಚಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಪ್ರಶಾಂತ ಫುಲಾರಿ, ಪ್ರಮುಖರಾದ ಚಂದು ಡಿ.ಕೆ, ಶಂಕು ನಿಷ್ಠತೆ, ಅಮೀತ್ ಶಿವಪೂಜೆ, ಬಾಲಾಜಿ ದಾಮಾ, ಮಹೇಶ ಸ್ವಾಮಿ, ವಿಶಾಲ್ ಕೋಳಿ, ಸುಮೀತ್ ಫುಲಾರಿ, ವಿಶಾಲ್ ಚಿದ್ರೆ, ಸಂತೋಷ್, ಅಭಿಜೀತ್ ಸ್ವಾಮಿ, ಕಲ್ಲಪ್ಪ ಎಕಲಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net