ವೇದಗಳಿಂದ ಮನುಷ್ಯ ಜೀವನ ಹಸನು

18-7 ctpr 3
ಚಿತ್ತಾಪುರದ ಅಕ್ಕಮಹಾದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಶ್ರೀ ಗುರುಮೂರ್ತಿ ಶಿವಾಚಾರ್ಯರು, ಶ್ರೀ ಮುನೀಂದ್ರ ಶಿವಾಚಾರ್ಯರು, ಶ್ರೀ ಪರ್ವತೇಶ್ವರ ಶಿವಾಚಾರ್ಯರು, ಶಿವಕುಮಾರ ಶಾಸ್ತ್ರಿ ಹಿರೇಮಠ, ಶಿವಕುಮಾರ ಪುರದಯ್ಯನಮಠ ಇದ್ದರು.
Published on

ಚಿತ್ತಾಪುರ (ಕಲಬುರಗಿ): ವೇದಗಳಿಗೆ ಅತಿ ಮಹತ್ವವಿದ್ದು, ಅವುಗಳು ಮನುಷ್ಯನ ಜೀವನವನ್ನು ಹಸನುಗೊಳಿಸುತ್ತವೆ ಎಂದು ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಶ್ರೀ ಋಗ್ವೇದ ವೈದಿಕ ಪುರೋಹಿತರ ಟ್ರಸ್ಟ್ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡ ಗುರು ಪೂರ್ಣಿಮೆ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಪುರಾಣ, ವೇದಗಳು ಮನುಷ್ಯನ ಸರಳ ಹಾಗೂ ಸುಖಿ ಜೀವನಕ್ಕೆ ದಾರಿದೀಪವಾಗಿವೆ ಎಂದರು.

ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಬೆಳಗುಂಪಿಯ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು, ಸೇಡಂ ಶ್ರೀ ಶಿವಶಂಕರ ಶಿವಾಚಾರ್ಯರು, ಹಲಕರ್ಟಿಯ ಶ್ರೀ ಮುನೀಂದ್ರ ಶಿವಾಚಾರ್ಯರು, ಶ್ರೀ ಶಾಂತಸೋಮನಾಥ ಶಿವಾಚಾರ್ಯರು, ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯರು, ಗುಂಡಗುರ್ತಿ ಶ್ರೀ ಸದ್ಯೋಜಾತ ಸ್ವಾಮೀಜಿ, ಶ್ರೀ ರಾಜಶೇಖರ ಸ್ವಾಮಿ, ಶ್ರೀ ಚನ್ನಬಸವ ಶರಣರು, ವೀರಶೈವ ಸಮಾಜ ಮುಖಂಡ ಚಂದ್ರಶೇಖರ ಅವಂಟಿ ಮಾತನಾಡಿದರು.

ಋಗ್ವೇದ ವೈದಿಕ ಪುರೋಹಿತರ ಟ್ರಸ್ಟ್ ಪದಾಧಿಕಾರಿಗಳಾದ ಶಿವಕುಮಾರ ಶಾಸ್ತ್ರೀ ಹಿರೇಮಠ, ಶಿವಕುಮಾರ ಪುರದಯ್ಯನಮಠ, ಮಂಜುನಾಥ ಶಾಸ್ತ್ರಿ, ಕರಿಬಸವಯ್ಯ ಶಾಸ್ತ್ರಿ ಮಂತ್ರಪಠಣ ಮಾಡಿದರು. ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಹೊನ್ನಾಳ, ಡಾ.ಶ್ರೀನಿವಾಸರೆಡ್ಡಿ ಕಂದಕೂರ, ಶರಣಕುಮಾರ ಪೊಲೀಸ್​ಪಾಟೀಲ್, ಶರಣಬಸಪ್ಪ ಬೊಮ್ಮನಹಳ್ಳಿ, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಅವರಿಗೆ ಶ್ರೀ ಗುರುರಕ್ಷೆ ನೀಡಿ ಗೌರವಿಸಲಾಯಿತು.

ಉದ್ಯಮಿ ಬಸವರಾಜ ಪಾಟೀಲ್ ಬೆಳಗುಂಪಾ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ ಪಾಟೀಲ್ ನರಬೋಳಿ, ಪ್ರಮುಖರಾದ ರವೀಂದ್ರ ಸಜ್ಜನಶೆಟ್ಟಿ, ನಾಗರಾಜ ಪರಂಡೆ, ಮಹಾದೇವಪ್ಪ ಪಾಲಪ್, ರಾಜಶೇಖರ ಬಳ್ಳಾ, ನಾಗರಾಜ ರೇಷ್ಮಿ, ವೀರಭದ್ರಪ್ಪ ಹುಮನಾಬಾದ್ ಇದ್ದರು. ವೀರೇಶ ಶಾಸ್ತ್ರಿ ಸ್ವಾಗತಿಸಿದರು, ಕಲ್ಯಾಣಕುಮಾರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net