ವೇತನ ಪಾವತಿಸಲು ಆಗ್ರಹ

Nagarajsangam
Published on

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಸಾಮಾಜಿಕ ಅರಣ್ಯ ವಿಭಾಗದಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ 2023ರ ಏಪ್ರಿಲ್ನಿಂದ ವೇತನ ಪಾವತಿಸದ ಕ್ರಮವನ್ನು ರಾಜ್ಯ ದಿನಗೂಲಿ, ಪಿಸಿಪಿ, ಹೊರಗುತ್ತಿಗೆ ಕ್ಷೇಮಾಭಿವೃದ್ಧಿ ನೌಕರರ ಸಂಘ ತೀವ್ರವಾಗಿ ಖಂಡಿಸಿದೆ.

ಕೂಡಲೇ ದಿನಗೂಲಿ ನೌಕರರಿಗೆ ವೇತನ ಪಾವತಿಸಬೇಕು. ಇಲ್ಲದಿದ್ದರೆ, ಅನಾಹುತವಾದರೆ ಇಲಾಖೆಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ನಾಗರಾಜ್ ಸಂಗಮ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net