ವೇತನ ನೇರವಾಗಿ ಪಾವತಿಸಿ

nrp manavi
ಎನ್.ಆರ್.ಪುರ ಪೌರ ಸೇವಾ ಕಾರ್ಮಿಕರ ಸಂಘದಿಂದ ಪಪಂ ಅಧ್ಯಕ್ಷೆ ಜುಬೇದಾ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್‌ಗೆ ಮನವಿ ನೀಡಿದರು. ಸುರೇಶ್, ಶ್ರೀನಿವಾಸ್, ಚಂದ್ರಶೇಖರ್ ಇತರರಿದ್ದರು.
Published on

ಎನ್.ಆರ್.ಪುರ: ಪಟ್ಟಣ ಪಂಚಾಯಿತಿ ಪೌರ ಸೇವಾ ನೌಕರರಿಗೆ ಸರ್ಕಾರ ವೇತನವನ್ನು ಅವರ ಖಾತೆಗಳಿಗೆ ನೇರವಾಗಿ ಹಾಕಬೇಕು ಎಂದು ಪೌರ ಸೇವಾ ಕಾರ್ಮಿಕರ ಸಂಘದ ಕಾರ್ಯದರ್ಶಿ ವಿಜಯಕುಮಾರ್ ಒತ್ತಾಯಿಸಿದರು.

ಪೌರ ಸೇವಾ ಕಾರ್ಮಿಕರ ಸಂಘದ ಶಾಖೆಯಿಂದ 20ಕ್ಕೂ ಹೆಚ್ಚು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಹಾಗೂ ಅಧ್ಯಕ್ಷೆ ಜುಬೇದಾ ಅವರಿಗೆ ಮನವಿ ನೀಡಿ ಮಾತನಾಡಿ, ಸರ್ಕಾರಿ ನೌಕರರಿಗೆ ಈಗ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ಪಪಂ ಪೌರ ಸೇವಾ ನೌಕರರಿಗೂ ನೀಡಬೇಕು ಎಂದು ಒತ್ತಾಯಿಸಿದರು. ಪೌರ ಸೇವಾ ನೌಕರರ ಸಂಘದ ಶಾಖಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಹರೀಶ್ ಹಾಗೂ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net