ವೇತನ ನೀಡುವಂತೆ ಪೌರ ಕಾರ್ಮಿಕರ ಒತ್ತಾಯ

9
Published on

ಚನ್ನಮ್ಮನ ಕಿತ್ತೂರ: ವೇತನ ನೀಡುವಂತೆ ಆಗ್ರಹಿಸಿದ ಸ್ಥಳಿಯ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಮಂಗಳವಾರ ಪಪಂ ಅಧಿಕಾರಿಗಳನ್ನು ಒತ್ತಾಯಿಸಿದರು. ಪೌರ ಕಾರ್ಮಿಕ ಸಂದ ಅಧ್ಯ ಮಹಾಂತೇಶ ವಕ್ಕುಂದ ಮಾತನಾಡಿ, ಪೌರ ಕಾರ್ಮಿಕರೆಲ್ಲರೂ ದಿನ ಬೆಳಗಾದರೆ ಪಟ್ಟಣದ ಸ್ವಚ್ಛತೆ ಕೈಗೊಳ್ಳುತ್ತೇವೆ. ನಮಗೆ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಸಾಲ ಸೋಲ ಮಾಡಿ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ವೇತನ ನೀಡಬೇಕು. ವಿಳಂಬ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಪಪಂ ಮುಖ್ಯಾಧಿಕಾರಿ ಎಂ.ವಿ. ಹಿರೇಮಠ ಮಾತನಾಡಿ, ಬೇಗ ವೇತನ ಪಾವತಿಸುವ ಭರವಸೆ ನೀಡಿದರು. ಪಪಂ ಆರೋಗ್ಯ ನಿರೀಕ ಮಂಜುನಾಥ ಬೂದಿಹಾಳ, ಪೌರ ಕಾರ್ಮಿಕರಾದ ತಿಪ್ಪಣ್ಣ ಚುಳಕಿ, ಸುರೇಶ ಕೆಳಗಡೆ, ನಾಗಪ್ಪ ಲಿಂಗಮೇತ್ರಿ, ಬಸ್ಸು ಕರಿಕಟ್ಟಿ, ಮಂಜುನಾಥ ಚಿನ್ನನ್ನವರ, ಮಂಜುನಾಥ ವಕ್ಕುಂದ, ನೀಲವ್ವ ವಕ್ಕುಂದ, ಸಾವಕ್ಕ ಚುಳಕಿ, ಕರವ್ವ ಚುಳಕಿ, ಕೀರವ್ವ ಚಿನ್ನನ್ನವರ, ಸುವರ್ಣಾ ಚಿನ್ನನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net