

ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎ್ಎಂ ಸಮುದಾಯ ಬಾನುಲಿ ಕೇಂದ್ರ, ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ವಿಶ್ವ ಅಧಿಕ ರಕ್ತದೊತ್ತಡ ದಿನದ ಅಂಗವಾಗಿ ಗುರುವಾರ ಅಧಿಕ ರಕ್ತದೊತ್ತಡ ವಿಷಯದ ನೇರ ಫೋನ್-ಇನ್ ಪ್ರಸಾರ ಕಾರ್ಯಕ್ರಮ ನಡೆಯಿತು.
ಕೆಎಲ್‌ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ, ಕೆಎಲ್‌ಇ ಆಸ್ಪತ್ರೆಯ ತಜ್ಞ ವೈದ್ಯೆ ಡಾ.ರೇಖಾ ಪಾಟೀಲ, ಡಾ.ಜಯಪ್ರಕಾಶ ಅಪ್ಪಾಜಿಗೋಳ, ಡಾ.ಮಾಧವ ಪ್ರಭು ಮತ್ತು ಡಾ.ಆರತಿ ದರ್ಶನ ಅವರು, ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮೂಲಕ ಜನಜಾಗೃತಿ ಮೂಡಿಸಿದರು.
ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ.ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.