

ಮೈಸೂರು: ಆಧುನಿಕ ಕಾಲಘಟ್ಟದ ವೇಗದ ಬದುಕಿಗೆ ಬಲಿಂಾಗಿ ನಮ್ಮ ಪರಂಪರೆಂು ಹೋರಾಟಗಳನ್ನು ಮರೆಂುುತ್ತಿದ್ದೇವೆ ಎಂದು ಶಾಸೀಂು ಕನ್ನಡ ಅತ್ಯುನ್ನತ ಅಧ್ಯಂುನ ಕೇಂದ್ರದ ಂೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಂುದ ತೆಲುಗು ಅಧ್ಯಂುನ ಮತ್ತು ಸಂಶೋಧನಾ ವಿಭಾಗವು ‘ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ಮತ್ತು ತೆಲುಗು ಕವಿಗಳ ಪಾತ್ರ’ ಕುರಿತು ಶುಕ್ರವಾರ ಆಂೋಜಿಸಿದ್ದ ಎರಡು ದಿನಗಳ ರಾಷ್ಟ್ರೀಂು ವಿಚಾರ ಸಂಕಿರಣದಲ್ಲಿ ಅವರು ವಾತನಾಡಿದರು.
ನಾಡು-ನುಡಿ ವಿಚಾರದಲ್ಲಿ ಎಲ್ಲರಲ್ಲೂ ಭಾವನಾತ್ಮಕ ಸಂಬಂಧವಿದೆ. ಆದರೆ ಮರೆವು ವೈಜ್ಞಾನಿಕ ಂುುಗದಲ್ಲಿ ಬದುಕುತ್ತಿರುವ ವಾನವನ ದೌರ್ಬಲ್ಯವಾಗಿದೆ. ನಮ್ಮ ನಾಡನ್ನು ಕಟ್ಟಿದವರ ಬಗ್ಗೆಂೆುೀ ತಿಳಿದುಕೊಳ್ಳಲು ಉತ್ಸಾಹ ತೋರುವುದಿಲ್ಲ. ಇತಿಹಾಸವನ್ನು ಆಗಾಗ ನೆನಪಿಸಿಕೊಳ್ಳುವ ಕಾಂರ್ು ವಾಡದಿದ್ದರೆ ಬದುಕಿನ ಸ್ವಾರಸ್ಯವನ್ನು ಕಳೆದುಕೊಳ್ಳುತ್ತೇವೆ ಎಂದು ಪ್ರತಿಪಾದಿಸಿದರು.
ಪರಿಪೂರ್ಣವಾದ ಪ್ರಗತಿ ಸಾಧಿಸಲು ಪರಂಪರೆಂು ಬಗೆಗಿನ ಕಾಳಜಿ, ವರ್ತವಾನದ ಜ್ಞಾನ ಹಾಗೂ ಭವಿಷ್ಯದ ಬಗ್ಗೆ ಕಲ್ಪನೆಗಳಿರಬೇಕು. ಹಿರಿಂುರ ಹೋರಾಟ, ತ್ಯಾಗದ ಲದಿಂದಾಗಿ ಇಂದು ಸ್ವಾತಂತ್ರ್ಯದ ಸುಖವನ್ನು ಅನುಭವಿಸುತ್ತಿದ್ದೇವೆ. ಆ ದಿನಗಳನ್ನು ಅವಲೋಕಿಸದಿದ್ದರೆ ಅದು ಬದುಕಿನ ದೊಡ್ಡ ಲೋಪವಾಗುತ್ತದೆ ಎಂದರು.
ಇತಿಹಾಸವನ್ನು ಅರಿಂುದವನು ಇತಿಹಾಸ ಸೃಷ್ಟಿಸಲಾರ ಎಂಬ ಅಂಬೇಡ್ಕರ್ ವಾತಿನ ಸೂಕ್ಷ್ಮವನ್ನು ನಾವು ತಿಳಿದುಕೊಳ್ಳಬೇಕು. ಕವಿಗಳ ಸಾಹಿತ್ಯದ ದಾಖಲೆಂುನ್ನು ಓದಿ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದವರನ್ನು ಗೌರವಿಸಬೇಕು ಎಂದರು.
‘ಸಾಹಿತ್ಯವು ಕೇವಲ ಮನರಂಜನೆಂು ವಾಧ್ಯಮವಲ್ಲ, ಅದು ಜೀವನದ ಪ್ರತಿಬಿಂಬ. ವೇದ ಕಾಲದಿಂದ ತೊಡಗಿ ಆಧುನಿಕ ಕಾಲದವರೆಗಿನ ಪ್ರತಿ ವಿದ್ಯಾವಾನಗಳನ್ನು ಸಂವೇದನಾಶೀಲ ಕವಿಗಳು ತಮ್ಮದೇ ಆಲೋಚನೆಗಳ ಮೂಲಕ ಸಾಹಿತ್ಯದ ರೂಪದಲ್ಲಿ ದಾಖಲು ವಾಡುವ ಕಾಂರ್ು ವಾಡಿದ್ದಾರೆ. ಅವನ್ನು ಪುನಃ ಓದುವ ಹವ್ಯಾಸವನ್ನು ಯುವ ಪೀಳಿಗೆ ರೂಢಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯದ ಕಾಲದಲ್ಲಿ ಕವಿಗಳು ಜಾತೀಂುತೆಂುನ್ನು ಮೀರಿ ಭಾರತೀಂುತೆಂುನ್ನು ಪ್ರೇರೇಪಿಸುವ ಸಾಹಿತ್ಯವನ್ನು ಜನರಿಗೆ ನೀಡಿದ್ದಾರೆ. ಆದರೆ ಈಗ ಜಾತಿಯತೆ ಸಾಹಿತ್ಯದಲ್ಲಿಯೂ ನಡೆಯುತ್ತಿರುವುದು ವಿಷಾದನೀಯ ಎಂದರು.
ಆಂಧ್ರಪ್ರದೇಶದ ನವ್ಯೇಂದ್ರ ರಚಯಿತ್ರುಲ ಸಂಗಮದ ಅಧ್ಯಕ್ಷೆ ತೆಲ್ಲಾ ಅರುಣ ಕುವಾರಿ ಮುಖ್ಯಭಾಷಣ ಮಾಡಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಕೆ.ಎಲ್.ಎನ್.ಮೂರ್ತಿ, ಹಣಕಾಸು ಅಧಿಕಾರಿ ಪ್ರೊ.ಖಾದರ್ ಪಾಷಾ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಲಕ್ಷ್ಮೀ, ಅಧ್ಯಂುನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ರಾಮನಾಥಂ ನಾಂ್ಡುು ಇದ್ದರು.