

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ವಿಶ್ವ ಕನ್ನಡ ಬಳಗ (ಹುಬ್ಬಳ್ಳಿ)ದಿಂದ ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೆಂಕಟೇಶ ಕಾಟವೆ ಅವರು ಸಾಮಾಜಿಕ, ಧಾರ್ವಿುಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಕಾಟವೆ ಅವರ ಮನೆಗೆ ಬಂದು ಪ್ರಶಸ್ತಿ ವಿತರಿಸಲಾಯಿತು.
ಬಳಗದ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಉಪಾಧ್ಯಕ್ಷರಾದ ಪ್ರಸನ್ನ ಕುಲಕರ್ಣಿ, ಅಮಿತ ಮಹಾಜನ, ದೀಪಕ ಗುಡ್ಡದಗೆರಿ, ಪ್ರಧಾನ ಕಾರ್ಯದರ್ಶಿ ದತ್ತುಸಾ ಕಲಬುರ್ಗಿ, ಸಂಚಾಲಕ ಸತೀಶ ಬೊಮ್ಮನಲ್ಲಿ, ಶಂಕರ ಮಿಸ್ಕಿನ್ ಇತರರು ಇದ್ದರು.