

ಮುಂಡರಗಿ: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಕೆರೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆಯಿಂದಾಗಿ ಕೆಸರುಗದ್ದೆಯಂತಾಗಿದ್ದು, ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
ಹಳ್ಳಿಕೇರಿ ಗ್ರಾಪಂ ವ್ಯಾಪ್ತಿಯ ವೆಂಕಟಾಪುರದಲ್ಲಿ ಕುಡಿಯುವ ನೀರು ತರಲು ತೆರಳುವ ರಸ್ತೆಯ 1 ಕಿ.ಮೀ.ನಷ್ಟು ಸಂಪೂರ್ಣ ಹಾಳಾಗಿದೆ. ರಸ್ತೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಬೈಕ್ ಸ್ಕಿಡ್ ಆಗಿ ಬಿದ್ದಿವೆ. ಮಹಿಳೆಯರು, ವೃದ್ಧರು ಕಾಲು ಜಾರಿ ಬಿದ್ದ ಘಟನೆಗಳು ಜರುಗಿವೆ. ರಸ್ತೆ ಬದಿ ಮುಳ್ಳಿನ ಗಿಡ-ಗಂಟಿಗಳು ಬೆಳೆದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಅಧಿಕಾರಿಗಳು ರಸ್ತೆ ದುರಸ್ತಿಪಡಿಸಿ, ಮುಳ್ಳಿನ ಗಿಡ-ಗಂಟಿಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಾದ ಚನ್ನಪ್ಪ ಹಳ್ಳಿ, ಗುರಪ್ಪ ಸಂಶಿ, ಈರಣ್ಣ ಮೂಗನೂರ, ಈರಪ್ಪ ಸಂಗನಾಳ, ಫಕೀರಪ್ಪ ಜರಕುಂಟಿ ಮತ್ತಿತರರು ಒತ್ತಾಯಿಸಿದ್ದಾರೆ.
ಸ್ಥಳ ಪರಿಶೀಲನೆ ಮಾಡಲಾಗುವುದು. ಮೇಲಧಿಕಾರಿಗಳಿಗೆ ತಿಳಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ದುರಸ್ತಿಗೊಳಿಸಲಾಗುವುದು.| ಶಿಲ್ಪಾ ಕವಲೂರ ಪಿಡಿಒ, ಹಳ್ಳಿಕೇರಿ ಗ್ರಾಪಂ
EndFragment