

ತೂಬಗೆರೆ: ತೂಬಗೆರೆಯ ಪ್ರಸನ್ನ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲದಲ್ಲಿ ಮಂಗಳವಾರ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, 1,65,695 ರೂಪಾಯಿ ಸಂಗ್ರಹವಾಗಿದೆ, ಕಳೆದ ವರ್ಷ 3.50 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಆದರೆ ಈ ವರ್ಷ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಇರುವ ಕಾರಣ ಕಾಣಿಕೆ ಸಂಗ್ರಹ ಕಡಿಮೆಯಾಗಿದೆ. ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜ್ ಮಾತನಾಡಿ, ಸ್ವಾಮಿಯ ರಾಜಗೋಪುರದ ಕೆಲಸ ಮುಗಿದಿದ್ದು, ೆಬ್ರವರಿ 15 ರಿಂದ 17ವರೆಗೆ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಉಪತಹಸೀಲ್ದಾರ್ ವೆಂಕಟೇಶ್ ಮೂರ್ತಿ, ಮುಜರಾಯಿ ಇಲಾಖೆಯ ಚೇತನ್, ಪ್ರಧಾನ ಅರ್ಚಕ ನಾರಾಯಣ, ನಾಡಕಚೇರಿ ಸಿಬ್ಬಂದಿ ಇದ್ದರು.