ವೆಂಕಟರಮಣಸ್ವಾಮಿ ರಥೋತ್ಸವ

ವೆಂಕಟರಮಣಸ್ವಾಮಿ ರಥೋತ್ಸವ
Published on


ಹೊಳೆನರಸೀಪುರ : ತಾಲೂಕಿನ ಹಳೇಕೋಟೆ ಬೆಟ್ಟದ ರಂಗನಾಥಸ್ವಾಮಿ ವಿಶೇಷ ಪೂಜೆ ಮತ್ತು ಮಾವಿನಕೆರೆ ವೆಂಕಟರಮಣಸ್ವಾಮಿ ರಥೋತ್ಸವ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆಗಳು ವಿದ್ಯುಕ್ತವಾಗಿ ನೇರವೇರಿತು.


ಬೆಳಿಗ್ಗೆ ಎಂದಿನಂತೆ ಬೆಟ್ಟದ ರಂಗನಾಥಸ್ವಾಮಿಗೆ ವಿಶೇಷ ಅಭಿಷೇಕಗಳು ಆರಂಭವಾಗಿ ವಿಶೇಷ ಪೂಜೆಗಳು ನಡೆದವು, ಬೆಳಗಿನಿಂದಲೇ ಬೆಟ್ಟದ ರಂಗನಾಥಸ್ವಾಮಿ ದರ್ಶನಕ್ಕೆ ಜಿಲ್ಲೆಯ ವಿವಿಧಡೆಗಳಿಂದ ಸಾವಿರಾರು ಭಕ್ತರುವ ಬೆಟ್ಟದ ರಂಗನಾಥನಿಗೆ ಸಾಲು ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.


ಮಾವಿನಕೆರೆ ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾಮಗಾರಿ ಭರದಿಂದ ಸಾಗಿರುವ ಹಿನ್ನೆಲೆಯಲ್ಲಿ ಈ ಭಾರಿ ರತೋತ್ಸವನ್ನು ರದ್ದು ಪಡಿಸಿ ಉತ್ಸವ ಮೂರ್ತಿಯನ್ನು ಸಣ್ಣ ತೇರಿನಲ್ಲಿ ಕುಳ್ಳರಿಸಿ ವಿವಿಧ ಪುಷ್ಪಾಲಾಂಕರಗೊಳಿಸಿ ಗ್ರಾಮದ ಸುತ್ತ ಮೆರವಣಿಗೆ ಮಾಡಲಾಯಿತು.


ಬೆಟ್ಟದ ರಂಗನಾಥಸ್ವಾಮಿ ಮತ್ತು ಮಾವಿನಕೆರೆ ವೆಂಕಟರಮಣಸ್ವಾಮಿ ರಥೋತ್ಸವದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಶಾಸಕ ರೇವಣ್ಣ ಅವರೊಂದಿಗೆ ತಾಲೂಕು ದಂಡಾಧಿಕಾರಿ ಹಾಗು ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಸೇರಿದಂತೆ ಕಂದಾಯ, ಹಾಗು ಮುಜರಾಯಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net