ಯಾದಗಿರಿ: ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಅಗಲಿಕೆ ಬಳಿಕ ಈ ಮನೆತನದ ಯಾರು ಸಕ್ರಿಯ ರಾಜಕಾರಣಕ್ಕೆ ಬರಲಿದ್ದಾರೆ ಎಂಬ ಗುಸುಗುಸು ಚರ್ಚೆ ಬುಧವಾರ ಮೃತರ ಮನೆ ಆವರಣದಲ್ಲೇ ಕೇಳಿಬಂದಿತು.
ಮೃತರ ಪುತ್ರ, ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಇಲ್ಲವೆ ಅವರ ಸಹೊದರರಲ್ಲಿ ಒಬ್ಬರೋ ಎಂಬ ಕುತೂಹಲ ಮೂಡಿಸಿದೆ. ಯಾದಗಿರಿ ಕ್ಷೇತ್ರದ ರಾಜಕೀಯ ವಲಯದಲ್ಲಿ ಮಹೇಶರಡ್ಡಿ ಮುದ್ನಾಳ್ ಹೆಸರೇ ಮುಂಚೂಣಿಯಲ್ಲಿದೆ. ಕಾರಣ ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಣ ಮತ್ತು ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು. 2023ರ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ತಂದೆ ವೆಂಕಟರಡ್ಡಿ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರ ಜತೆ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸುವ ಮೂಲಕ ವರಿಷ್ಠರ ಗಮನ ಸೆಳೆದಿರುವುದು.
ಮನೆತನದ ಅತ್ಯಂತ ಹಿರಿಯರು, ಮಾಜಿ ಮಂತ್ರಿಗಳಾಗಿದ್ದ ದಿ.ವಿಶ್ವನಾಥರಡ್ಡಿ ಮುದ್ನಾಳ್, ಡಾ.ವೀರಬಸವಂತರಡ್ಡಿ ಮುದ್ನಾಳ್ ಹಾಗೂ ವೆಂಕಟರಡ್ಡಿ ಮುದ್ನಾಳ್ ಸಕ್ರಿಯ ರಾಜಕಾರಣದಲ್ಲಿ ಅನೇಕ ಚುನಾವಣೆಗಳನ್ನು ಎದುರಿಸಿ ಸೋಲು-ಗೆಲುವು ಕಂಡಿದ್ದವರು. ಅಷ್ಟೆ ಅಲ್ಲ, ಯಾದಗಿರಿ ಮತ್ತು ಗುರುಮಠಕಲ್ ಮತಕ್ಷೇತ್ರಗಳಲ್ಲಿ ಇರುವವರೆಗೆ ನಡೆದ ಎಲ್ಲ ಲೋಕಲ್ ಎಲೆಕ್ಷನ್‌ಗಳಲ್ಲಿ ಪಕ್ಷದ ಅನೇಕರು ಮತ್ತು ಅವರ ಅನುಯಾಯಿಗಳಿಗೆ ಅವಕಾಶ ಕಲ್ಪಿಸಿ ಅಧಿಕಾರ ನೀಡಿದ್ದಾರೆ.
ಹೀಗಾಗಿ ಇಲ್ಲಿ ಯಾರೇ ರಾಜಕೀಯ ಮಾಡಿದರೂ ಮುದ್ನಾಳ್ ಮನೆತನದ ಬೆಂಬಲ ಬೇಕೇಬೇಕು ಎಂಬAತಹ ವಾತಾವರಣವಿದೆ. ಇದಕ್ಕೆ ಕಾರಣ ಈ ಮನೆತನದವರು ಚುನಾವಣೆ ಗೆಲ್ಲಲ್ಲಿ, ಸೋಲಲಿ. ಇಂತಿಷ್ಟು ಸಾವಿರ ಮತ ಬಂದೇ ಬರುತ್ತವೆ. ಅಷ್ಟು ಗಟ್ಟಿ ಬೇರು ಇವರಿಗಿದೆ ಎಂಬ ಮಾತು ಹಿರಿಯರದು.
ವಿಧಾನಸಭೆ ಚುನಾವಣೆಗೆ ಇನ್ನೂ ಮೂರೂವರೆ ವರ್ಷ ಬಾಕಿ ಇದೆ. ಆದರೆ ಮುಂದಿನ ಸಲ ಯಾದಗಿರಿ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕೆಂದರೆ ಅಭ್ಯರ್ಥಿ ಆಗಬೇಕೆನ್ನುವವರು ಈಗಿನಿಂದಲೇ ತಾಲೀಮು ಶುರು ಮಾಡಬೇಕು. ಜತೆಗೆ ಬಿಜೆಪಿ ರಾಜ್ಯ ಮತ್ತು ರಾಷ್ಟç ನಾಯಕರೊಂದಿಗೆ ಉತ್ತಮ ಸಂಬAಧ ಇಟ್ಟುಕೊಳ್ಳಬೇಕು. ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ಆಯೋಜನೆ ಮಾಡಬೇಕು. ಸದಸ್ಯತ್ವ ಹೆಚ್ಚಿಸಿ ಸಂಘಟನೆಯೊAದಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು. ಪ್ರತಿ ಮಂಡಲದಲ್ಲಿ ಕಾರ್ಯಕರ್ತರ ಪಡೆ ಹೊಂದಿರಬೇಕು. ಹೀಗೆ ಫುಲ್ ಟೈಂ ಪಾಲಿಟಿಕ್ಸ್ನಲ್ಲಿ ಇರುವ ಅಗತ್ಯವಿದೆ.
ವಿಜಯೇಂದ್ರ ಭೇಟಿ ಪಸ್ಲ್ ಪಾಯಿಂಟ್: ವೆಂಕಟರಡ್ಡಿ ಮುದ್ನಾಳ್ ನಿಧನದ ಸುದ್ದಿ ತಿಳಿಯುತ್ತಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಂತಿಮ ನಮನ ಸಲ್ಲಿಸಿ ತನ್ನ ಆಪ್ತನಿಗೆ ಗೌರವಿಸಿದ್ದರೆ, ಪಾರ್ಥಿವ ಶರೀರದ ಅಂತಿಮ ಪಡೆಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನಿAದ ಯಾದಗಿರಿಗೆ ಬಂದಿದ್ದು, ಮುದ್ನಾಳ್ ಮನೆತನದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸಿಕೊಟ್ಟಿದೆ. ಜತೆಗೆ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪಿ.ರಾಜೀವ್, ಮಾಜಿ ಮಂತ್ರಿ ನರಸಿಂಹ ನಾಯಕ, ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್ ಸೇರಿ ಅನೇಕರು ದೌಡಾಯಿಸಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿರುವುದು ಮುಂದಿನ ದಿನಗಳಲ್ಲಿ ಮುದ್ನಾಳ್ ಮನೆತನಕ್ಕೆ ಬಹುದೊಡ್ಡ ಶಕ್ತಿ ಸಿಕ್ಕಂತಾಗಲಿದೆ.