ವೃದ್ಧೆಯ ನಂಬಿಸಿ ಮಾಂಗಲ್ಯ ಸರ ಎಗರಿಸಿದ ಚಾಲಾಕಿಗಳು

Published on

ಜನನಿಬೀಡ ಪ್ರದೇಶದಲ್ಲೇ ಈ ಕೃತ್ಯ ನಡೆದಿದ್ದನ್ನು ತಿಳಿದ ಸಾರ್ವಜನಿಕರು ಶಾಕ್ ಆಗಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಜಾನ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಲ್‍ಪೇಟ್ ಪೆÇಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂಬಾರಪೇಟೆಯಲ್ಲಿ ಮಡಿಕೆ ವ್ಯಾಪಾರ ಮಾಡುತ್ತಿದ್ದ ಯಶೋಧಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಮಡಿಕೆ ಖರೀದಿಸುವ ನೆಪದಲ್ಲಿ ಅಗಮಿಸಿದ ಇಬ್ಬರು ಚಾಲಾಕಿ ಚೋರರು ತಾವು ದೇವಿ ಆರಾಧಕರು ಎಂದು ನಂಬಿಸಿದ್ದಾರೆ. ಅಗಂತುಕರ ಬಣ್ಣದ ಮಾತುಗಳಿಗೆ ಮಾರುಹೋದ ವೃದ್ಧೆ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಮಡಿಕೆಯಲ್ಲಿ ಹಾಕಿ ಪೂಜೆ ಮಾಡಲು ನೀಡಿದ್ದಾರೆ. ಸರ ಮಡಿಕೆಯ ತಳ ಸೇರುತ್ತಿದ್ದಂತೆಯೇ ಅಪರಿಚಿತರು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ದೇವಿ ಆರಾಧಕರು ಎಂದು ವೃದ್ಧೆಯನ್ನು ನಂಬಿಸಿದ ಚಾಲಾಕಿಗಳು ಮಾಂಗಲ್ಯ ಸರವನ್ನು ಎಗರಿಸಿ ಪರಾರಿಯಾಗಿರುವ ಘಟನೆ ಕೋಲಾರ ನಗರದ ಕುಂಬಾರಪೇಟೆಯಲ್ಲಿ ಮಂಗಳವಾರ ನಡೆದಿದೆ.

ವಿಜಯವಾಣಿ ಸುದ್ದಿಜಾಲ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net