ವೃದ್ಧಾಶ್ರಮಕ್ಕೆ ಕೆಎಲ್​ಇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭೇಟಿ

19 Jaggu 1
Published on

ಬೆಳಗಾವಿ: ನಾಗನೂರು ಶ್ರೀಶಿವಬಸವ ಟ್ರಸ್ಟ್​ನ ಚಿನ್ನಮ್ಮ ಬಸವಂತಯ್ಯ ಹಿರೇಮಠ ವೃದ್ಧಾಶ್ರಮಕ್ಕೆ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ಭೇಟಿ ನೀಡಿ ವಯೋವೃದ್ಧರ ಯೋಗೇಮ ವಿಚಾರಿಸಿದರು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್​.ಎಸ್​.ನೇಸರಗಿ ಮಾತನಾಡಿ, ವೃದ್ಧರು ತಮ್ಮ ಬಾಳಿನ ಜೀವನವನ್ನು ಶಾಂತಿಯಿಂದ ಕಳೆಯಬೇಕಾಗಿದೆ. ಅವರ ಅನುಭವ ಮತ್ತು ಾನವನ್ನು ಯುವ ಪ್ರಜೆಗಳಿಗೆ ಹಂಚುವ ಸಲುವಾಗಿ ಯುವಕರು ಇಂತಹ ಆಶ್ರಮಕ್ಕೆ ಭೇಟಿಯಾಗುವ ಮೂಲಕ ವೃದ್ಧರನ್ನು ಗೌರವಿಸಿ, ನಮ್ಮ ಸಂಸತಿ ಮಾನವೀಯತೆ ಸಹಾನುಭೂತಿಯ ಅನುಭವವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು. ವಯೋ ವೃದ್ಧರಿಂದ ನಾವು ಅವರ ಜೀವನದ ಅನುಭವಗಳನ್ನು ಕಲಿಯಬಹುದು. ಇದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುತ್ತದೆ ಎಂದರು.  ಪ್ರೊ.ಮಲ್ಲೆಶ ಸಂಜೀವಣ್ಣವರ, ವೃದ್ಧಾಶ್ರಮದ ಸಂಯೋಜಕ ಎಂ.ಎಸ್​. ಚೌಗಲಾ, ಜಾನಕಿ ಹಾಗೂ ಕೆ.ಎಲ್​.ಇ ತಾಂತ್ರಿಕ ವಿವಿ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net