

ಬೆಳಗಾವಿ: ಸಮಾಜದಲ್ಲಿ ವೃದ್ಧಾಶ್ರಮಗಳು ಕಡಿಮೆಯಾಗಬೇಕು. ಕುಟುಂಬ ಸದಸ್ಯರು ವೃದ್ಧ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸದೆ ಮನೆಯಲ್ಲಿ ಅವರ ಆರೈಕೆ ಮಾಡಬೇಕು ಎಂದು ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅಧ್ಯಕ್ಷ ಪ್ರೊ.ಉದಯಸಿಂಗ್ ರಜಪೂತ ಹೇಳಿದರು.
ಬಸವನ ಕುಡಚಿ ಗ್ರಾಮದಲ್ಲಿರುವ ನಾಗನೂರ ಶ್ರೀ ಶಿವಬಸವ ಟ್ರಸ್ಟಿನ ಶ್ರೀಮತಿ ಚಿನ್ನಮ್ಮ ಹಿರೆಮಠ ವೃದ್ಧಾಶ್ರಮಕ್ಕೆ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ವತಿಯಿಂದ ನೀಡಲಾದ ಸುಮಾರು 50 ಸಾವಿರ ರೂ. ಮೌಲ್ಯದ ದಿನನಿತ್ಯದ ಅವಶ್ಯಕ ವಸ್ತುಗಳ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಸೇವೆಯೇ ಭಗವಂತನ ಸೇವೆ ಎಂದರಿತಾಗ ಮಾತ್ರ ಜನ್ಮಕೊಟ್ಟವರ ಋಣ ತೀರಿಸಬಹುದಾಗಿದೆ. ಅವರಿಂದ ಪಡೆದ ನಮ್ಮ ಜನ್ಮ ಸಾರ್ಥಕವಾಗಬಲ್ಲದು ಎಂದು ಹೇಳಿದರು.
ಅಶೋಕ ಮಳಗಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ನಂದನ ಬಾಗಿ, ರಾಜೀವ ದೇಶಪಾಂಡೆ, ರೂಪಾ ದೇಶಪಾಂಡೆ, ಅನಿಲ ಬಾಗಿ, ಅಶೋಕ ಬದಾಮಿ, ರಾಮ ಸಾಂಗಲೆ, ಸತೀಶ ಮಿಠಾರೆ, ಸತೀಶ ನಾಯಿಕ, ಡಾ.ವಿಜಯ ಪೂಜಾರ, ಪ್ರೊ.ಕೊಲ್ಹಾಪುರೆ, ಮಹಿಳಾ ಸಾಂತ್ವನ ಕೇಂದ್ರದ ಮಧು, ವೃದ್ಧಾಶ್ರಮದ ಆಡಳಿತಾಧಿಕಾರಿ ಚೌಗಲಾ, ಇತರರಿದ್ದರು.