ವೃದ್ಧನ ಖಾತೆಯಿಂದ 20 ಸಾವಿರ ರೂ. ವಂಚನೆ

Published on

ಗುಬ್ಬಿ: ತಾಲೂಕಿನ ಕಲ್ಲೂರು ಎಸ್​ಬಿಐ ಬ್ಯಾಂಕಿನ ವೃದ್ಧನ ಉಳಿತಾಯ ಖಾತೆಯಿಂದ 20 ಸಾವಿರ ಹಣ ಖಾತೆಯಿಂದ ವರ್ಗಾವಣೆಯಾಗಿದ್ದು, ಈ ಬಗ್ಗೆ ಸಣ್ಣ ರಂಗಯ್ಯ ಸೈಬರ್​ ಪೋರ್ಟಲ್​ ಮೂಲಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ಕಳೆದುಕೊಂಡಿರುವ ಬಗ್ಗೆ ಬ್ಯಾಂಕಿನ ಸಿಬ್ಬಂದಿ ಬಳಿ ವಿಚಾರಿಸಿದಾಗ ನಮಗೂ ಹಣ ಕಳೆದಿರುವುದಕ್ಕೂ ಸಂಬಂಧವಿಲ್ಲ ಎಂದು ಉಢಾಪೆ ಮಾತನಾಡುತ್ತಾರೆ. ಸಮರ್ಪಕವಾಗಿ ಗ್ರಾಹಕರಿಗೆ ಸ್ಪಂದಿಸುವುದಿಲ್ಲ. ನನ್ನ ಖಾತೆಯಿಂದ ಅಪರಿಚಿತರು ಹಣ ವರ್ಗಾವಣೆ ಮಾಡಿ ವಂಚನೆ ಮಾಡಿದ್ದಾರೆ. ಯಾರಿಗೆ ನನ್ನ ಬ್ಯಾಂಕ್​ ಖಾತೆ ಸಂಖ್ಯೆ ಕೊಟ್ಟಿಲ್ಲ, ಯಾರು ಒಟಿಪಿ ಸಹ ಕೇಳಿಲ್ಲ. ಆದರು ಸಹ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಚಿಕ್ಕ ಕಲ್ಲೂರು ಗ್ರಾಮದ ಸಣ್ಣ ರಂಗಯ್ಯ ಅಳಲು ತೊಂಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net