ವೃತ್ತಿಪರ ನೇಕಾರರಿಗೆ ಕಾರ್ಮಿಕ ಗುರುತಿನ ಚೀಟಿ ನೀಡಿ

bkt-6-7
Published on

ಬಾಗಲಕೋಟೆ: ವೃತ್ತಿಪರ ನೇಕಾರ ಸಮ್ಮಾನ ಯೋಜನೆ ಹಣ ಸಂದಾಯ ಮತ್ತು ಕಾರ್ಮಿಕ ಗುರುತಿನ ಚೀಟಿ ಹಂಚಿಕೆ ಮಾಡಿ ಸೌಲಭ್ಯ ಒದಗಿಸುವುದು ಹಾಗೂ ನೇಕಾರರೊಂದಿಗೆ ಬಜೆಟ್ ಪೂರ್ವ ಸಭೆ ಆಯೋಜಿಸಬೇಕೆಂದು ಆಗ್ರಹಿಸಿ ರಾಜ್ಯ ನೇಕಾರ ಸೇವಾ ಸಂಘದಿಂದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರಿಗೆ ಮನವಿ ಸಲ್ಲಿಸಲಾಯಿತು.

ಇಲ್ಲಿನ ಜಿಲ್ಲಾಡಳಿತದ ಎದುರು ಮನವಿ ಸಲ್ಲಿಸಿ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರಕಿ ಮಾತನಾಡಿ, ರಾಜ್ಯದ ವೃತ್ತಿಪರ ನೇಕಾರಿಗೆ ಪ್ರತಿ ವರ್ಷದಂತೆ ನೇಕಾರ ಸಮ್ಮಾನ ಯೋಜನೆಯ ಸಹಾಯ ಧನ ಇನ್ನೂ ಸಂದಾಯವಾಗಿಲ್ಲ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಕೂಡಲೇ ಸಂದಾಯ ಮಾಡಬೇಕೆಂದು ಒತ್ತಾಯಿಸಿದರು.

ಅಸಂಘಟಿತ ವಲಯದ ಕಾರ್ಮಿಕರ ಗುರುತಿನ ಚೀಟಿ ತಯಾರಾಗಿದ್ದು, ಕೂಡಲೇ ಹಂಚಿಕೆ ಮಾಡಬೇಕು. ಮತ್ತು ಕಟ್ಟಡ ಕಾರ್ಮಿಕ ಮಾದರಿಯ ಸೌಲಭ್ಯಗಳನ್ನು ವೃತ್ತಿಪರ ನೇಕಾರರಿಗೂ ಜಾರಿ ಮಾಡಿ ಕಟ್ಟಕಡೆಯ ನೇಕಾರರಿಗೂ ಒದಗಿಸಬೇಕು ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಸಹಕಾರಿ ಸಂಘ-ಸಂಸ್ಥೆಗಳಲ್ಲಿ ನೇಕಾರರ ಹೆಸರಿನಲ್ಲಿ ಕೋಟ್ಯಾಂತರ ರು. ಅವ್ಯವಹಾರ ನಡೆಯುತ್ತಿದ್ದು, ಸರ್ಕಾರ ಕೂಡಲೇ ಕಟ್ಟು ನಿಟ್ಟಿನಲ್ಲಿ ಕ್ರಮ ವಹಿಸಿ ಭ್ರಷ್ಟಾಚಾರ ನಿಲ್ಲಿಸಬೇಕು ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಅನೇಖ ಯೋಜನೆಗಳು ಅನುದಾನವಿಲ್ಲದೇ ನೇಕಾರರಿಗೆ ಸೌಲಭ್ಯಗಳು ದೊರೆಯದೇ ವಂಚಿತರಾಗುತ್ತಿದ್ದಾರೆ. ಬರುವ ಹೇಳಿಕೆಯನ್ನು ಕನಿಷ್ಠ ೧,೫೦೦ ಕೋಟಿ ರು. ವಿಶೇಷ ಅನುದಾನ ಇಲಾಖೆಗೆ ಒದಗಿಸಿ ಸಮರ್ಪಕ ಯೋಜನೆಗಳನ್ನು ನೇಕಾರರಿಗೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಮಾಗುಂಡಪ್ಪ ಹಾನಾಪುರ, ಮಲ್ಲಿಕ ಜಮಾದಾರ್, ಶಿವಾನಂದ ಹಾದಿಮನಿ, ರಾಜು ತಿರ್ಕಪಡಿ, ರತ್ನಾ ಮಿರಜಕರ್, ಲಕ್ಣ್ಮೀ ಬೀಳಗಿ, ಜಯಶ್ರೀ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net