ವೃತ್ತಿಗೆ ಗೌರವ ಸಿಗುವಂತೆ ಕರ್ತವ್ಯ ನಿರ್ವಹಿಸಿ

17 CRP 03
ಚನ್ನರಾಯಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಬಾಳ್ಳು ಗೋಪಾಲ್ ಮಾತನಾಡಿದರು. ನಂಜುಂಡೇಗೌಡ, ಮಂಜು ಬನವಾಸೆ, ಎಚ್.ಬಿ.ಮದನಗೌಡ, ಅಶೋಕ್ ಕುಮಾರ್, ಎಂ.ಎಂ.ಜಯರಾಂ, ಕೆ.ಪಿ.ಪುಟ್ಟರಾಜ್, ದಯಾನಂದ್ ಇದ್ದರು.
Published on

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಸಲಹೆ


ಚನ್ನರಾಯಪಟ್ಟಣ: ನಾವು ಮಾಡುವ ವೃತ್ತಿಗೆ ಗೌರವ ಸಿಗುವಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಹೇಳಿದರು.


ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಂಘಕ್ಕೆ ಪೂರಕವಾಗಿ ಕೆಲಸ ಮಾಡುವ ಮೂಲಕ ಕೊಡುಗೆಯಾಗಿರಬೇಕೆ ಹೊರತು ಸಂಘಕ್ಕೆ ಚುತಿ ಬರುವಂತೆ ನಡೆದುಕೊಳ್ಳಬಾರದು ಎಂದು ಸಲಹೆ ನೀಡಿದರು.


ಪತ್ರಕರ್ತರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವುದರಿಂದ ಸಮಾಜದ ಸ್ವಾಸ್ಥ್ಯದ ಜತೆಗೆ ಸಂಘದ ಬೆಳವಣಿಗೆ ಹಾಗೂ ಗೌರವ ಹೆಚ್ಚುತ್ತದೆ. ಇಲ್ಲವಾದಲ್ಲಿ ಸಂಘದ ವ್ಯವಸ್ಥೆ ಹದಗೆಡಲಿದೆ ಎಂದರು.


ಸಮಾರಂಭದಲ್ಲಿ ಬಾಳ್ಳು ಗೋಪಾಲ್ ಹಾಗೂ ಇತರರನ್ನು ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷ ನಂಜುಂಡೇಗೌಡ, ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ, ಹಿರಿಯ ಪತ್ರಕರ್ತರಾದ ಎಚ್.ಬಿ.ಮದನಗೌಡ, ಅಶೋಕ್‌ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಂ.ಜಯರಾಂ, ಉಪಾಧ್ಯಕ್ಷ ಕೆ.ಪಿ.ಪುಟ್ಟರಾಜ್, ಪ್ರಧಾನ ಕಾರ್ಯದರ್ಶಿ ದಯಾನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net