ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

16 gkp 02
Published on

ಗೋಣಿಕೊಪ್ಪ: ಓಜಸ್ವಿ ಫೌಂಡೇಷನ್‌ನ ವತಿಯಿಂದ ಓಜಸ್ವಿ ಸ್ಫೂರ್ತಿ ವಿರಾಜಪೇಟೆ ತಾಲೂಕು ಮಟ್ಟದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಗೋಣಿಕೊಪ್ಪ ಲಯನ್ಸ್ ಶಾಲಾ ಸಭಾಂಗಣದಲ್ಲಿ ಬುಧವಾರ ನಡೆಯಿತು.


ವಿರಾಜಪೇಟೆ ತಾಲೂಕು ಸರ್ಕಾರಿ ಶಾಲೆಗಳ ಸುಮಾರು 500 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಕೌಶಲ್ಯ ತರಬೇತುದಾರ ಆರ್.ಎ. ಚೇತನ್‌ರಾಮ್ ಪ್ರೇರಣೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಮಾಹಿತಿ ನೀಡಿದರು. ಹಾಸನದ ಪಿರಮಿಡ್ ಸೊಸೈಟಿ ಮೂವ್‌ಮೆಂಟ್‌ನ ಸಿ.ಎಸ್. ಷಡಕ್ಷರಿ ಧ್ಯಾನ ಮತ್ತು ಅಭ್ಯಾಸ ಮಾಹಿತಿ ನೀಡಿದರು. ಬೆಂಗಳೂರಿನ ಸಂಕಲ್ಪ್ ಮುಖ್ಯಸ್ಥ ಬಿ.ಕೆ. ಸತೀಶ್ ಕೌಶಲ್ಯ ಕರ್ನಾಟಕ ಯೋಜನೆ ಅರಿವು, ಕೋರ್ಸ್ ಮತ್ತು ಜಾಗೃತಿ ಹಾಗೂ ಅವಕಾಶಗಳ ಬಗ್ಗೆ ತಿಳಿಸಿದರು.


ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಪೊನ್ನಂಪೇಟೆ ಬಿಸಿಡಬ್ಲ್ಯೂಡಿ ತಾಲೂಕು ಅಭಿವೃದ್ಧಿ ಅಧಿಕಾರಿ ಹೆಚ್.ಸಿ. ನಾಗರಾಜು, ಪೊನ್ನಂಪೇಟೆ ತಾಲೂಕು ಬುಡಕಟ್ಟು ಕ್ಷೇಮಾಭಿವೃದ್ಧಿ ಅಧಿಕಾರಿ ಗುರುಶಾಂತಪ್ಪ ಮಾಹಿತಿಯನ್ನು ನೀಡಿದರು.


ಓಜಸ್ವಿ ಫೌಂಡೇಷನ್ ಸಂಸ್ಥಾಪಕಿ ಡಾ.ಪಿ.ಸಿ. ಕವಿತಾ, ಮಡಿಕೇರಿ ಕೂರ್ಗ್ ಎಜುಕೇಷನ್ ಫಂಡ್ ಟ್ರಸ್ಟ್ ಅಧ್ಯಕ್ಷ ಸುಭಾಷ್ ಮುತ್ತಣ್ಣ, ಮಾಜಿ ಅಧ್ಯಕ್ಷ ಕೆ.ಪಿ. ಉತ್ತಪ್ಪ, ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಚಿಣ್ಣಪ್ಪ, ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ, ಡಿಡಿಪಿಐ ರಂಗಮಾದಯ್ಯ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಪಿ.ಆರ್ ಅಯ್ಯಪ್ಪ, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಬೋಸ್ ಪೆಮ್ಮಯ್ಯ, ಮುಖ್ಯ ಶಿಕ್ಷಕಿ ಪಿ.ಡಿ.ತಂಗಮ್ಮ, ಓಜಸ್ವಿ ಟ್ರಸ್ಟಿ ಯು.ಜಿ. ವಿಜಿತ, ಬ್ರಿಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net