

ಕಲಬುರಗಿ: ಐಟಿ ಮತ್ತು ನೆಟ್‌ವರ್ಕಿಂಗ್ ಇಂಜಿನಿಯರಿಂಗ್ ಸ್ನಾತಕೋತ್ತರ ಪ್ರಮಾಣಪತ್ರ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ (ಕೆಜಿಟಿಟಿಐ) ನಿರ್ದೇಶಕ ಸ್ಯಾಮುವೆಲ್ ಪ್ರಶಾಂತಕುಮಾರ ತಿಳಿಸಿದರು.
ಕೆಜಿಟಿಟಿಐ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಐಟಿ ಮತ್ತು ನೆಟ್‌ವರ್ಕಿಂಗ್ ಇಂಜಿನಿಯರಿAಗ್‌ನಲ್ಲಿ ಸ್ನಾತಕೋತ್ತರ ಪ್ರಮಾಣ ಪತ್ರ ಕಾರ್ಯಕ್ರಮದಡಿ ವೃತ್ತಿ ತರಬೇತಿ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಟಿ ಮತ್ತು ನೆಟ್‌ವರ್ಕಿಂಗ್‌ನಲ್ಲಿ ತರಬೇತಿ ಹೊಂದಿದವರು ನೆಟ್‌ವರ್ಕ್ ಅಡ್ಮಿನಿಸ್ಟೇಟರ್, ನೆಟ್ ವರ್ಕ್ ಸಫೋರ್ಟ್ ಸ್ಪೆಷಲಿಸ್ಟ್, ನೆಟ್‌ವರ್ಕ್ ಇಂಜಿನಿಯರ್, ಸೈಬರ್ ಸೆಕ್ಯುರಿಟಿ ಸ್ಪೆಷಲಿಸ್ಟ್ ಮತ್ತು ಕ್ಲೌಡ್ ಸ್ಪೆಷಲಿಸ್ಟ್ ತರಬೇತಿಯನ್ನು ನೀಡಲಾಗುತ್ತದೆ. ಪ್ರಸ್ತುತ ಈ ವಿಷಯಗಳ ಪರಿಣಿತರಿಗೆ ಉದ್ಯಮದಲ್ಲಿ ಉತ್ತಮ ಬೇಡಿಕೆ ಇದೆ ಎಂದರು.
ಕೋರ್ಸ್ ಪ್ರವೇಶಕ್ಕೆ ಕನಿಷ್ಠ ಶೇ.೫೦ ಅಂಕದೊAದಿಗೆ ವಿಜ್ಞಾನ, ಐಟಿ, ಇಂಜಿನಿಯರಿAಗ್ ಮತ್ತು ಸಂಬAಧಿತ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಸೆ.೧೦ ಅರ್ಜಿ ಸಲ್ಲಿಸಲು ಕೊನೇ ದಿನ. ಮಾಹಿತಿಗೆ ೯೦೭೧೪೨೩೦೦೦೪, ೯೦೭೧೪೨೩೦೦೫, ೦೮೪೭೨-೨೫೨೧೧೧ ಗೆ ಸಂಪರ್ಕಿಸಿ. eಠಿಠಿmo://ಡಿಡಿಡಿ.hಜಠಿಠಿಜಿ.್ಚಟಞ/ ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಹತ್ತಿರ ಬಿಇಒ ಕಚೇರಿ ಹಿಂದೆ ಇರುವ ಕಚೇರಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು.