ವೃತ್ತಿ ಕೌಶಲ ಬೆಳೆಸಿಕೊಳ್ಳಿ

1 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧುನಿಕ ಯುಗದಲ್ಲಿ ತಾತ್ವಿಕ ಶಿಕ್ಷಣದಿಂದ ವಿದ್ಯಾರ್ಥಿ ಜೀವನೋಪಾಯ ಕಂಡುಕೊಳ್ಳಲಾಗದು. ವೃತ್ತಿ ಕೌಶಲ ಕಲಿಯುವುದರಿಂದ ತನ್ನ ಉದ್ಯೋಗವನ್ನು ತಾನೇ ಸೃಷ್ಟಿಸಿಕೊಳ್ಳುವುದರ ಜತೆಗೆ ಸಮಾಜದಲ್ಲಿನ ನಿರುದ್ಯೋಗಿಗಳ ಉದ್ಯೋಗಕ್ಕೆ ಆಸರೆಯಾಗುತ್ತಾನೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಕೈಗಾರಿಕಾ ಸಂಸ್ಥೆಯಲ್ಲಿ 2023-24ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಅತಿಥಿ ಉಪನ್ಯಾಸ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಜೆಎಸ್‌ಎಸ್ ಉದ್ದೇಶ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣಕ್ಕೆ ಒತ್ತು ನೀಡಿ ತಂದೆ-ತಾಯಿಗಳಿಗೆ ಆಸರೆಯಾಗಬೇಕು. ಅತಿಥಿ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ದಾರಿ ದೀಪಗಳಾಗಲಿವೆ ಎಂದರು.
ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಉಪನ್ಯಾಸ ನೀಡಿ, ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ, ಶ್ರದ್ಧೆ, ನಿಷ್ಠೆ, ಶಿಸ್ತು, ಶಿಕ್ಷಣ, ದಕ್ಷತೆ, ಸಾಮರ್ಥ್ಯ, ಬುದ್ಧಿ, ಪ್ರಾಮಾಣಿಕತೆ ಇವು ಒಬ್ಬ ಆದರ್ಶ ವಿದ್ಯಾರ್ಥಿ ಲಕ್ಷಣ. ಮನುಷ್ಯನ ವ್ಯಕ್ತಿತ್ವ ಆತನ ಜನನದಿಂದ ಪ್ರಾರಂಭವಾಗಿ ಅಂತ್ಯದವರೆಗೂ ರೂಪಗೊಳ್ಳುತ್ತಾ ಹೋಗುತ್ತದೆ. ಪ್ರತಿಯೊಬ್ಬರ ಜೀವನದ ಒಳಿತು ಹಾಗೂ ಕೆಡಕುಗಳಿಗೆ ಸ್ವಯಂ ಕಾರಣಿಭೂತರಾಗಿರುತ್ತಾರೆ. ಹೀಗಾಗಿ ನಮ್ಮ ವ್ಯಕ್ತಿತ್ವ ನಮ್ಮ ಕೈಯಲ್ಲಿದ್ದು, ಅದನ್ನು ಸರಿಯಾಗಿ ಬೆಳೆಸಿಕೊಳ್ಳುವುದು ನಮ್ಮ ಜವಬ್ದಾರಿ ಎಂದರು.
ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಮಾತನಾಡಿ, ಮಕ್ಕಳು ಸರಿದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳುವುದು ತಂದೆ-ತಾಯಿ ಜವಾಬ್ದಾರಿ. ಮಕ್ಕಳು ತಂದೆ-ತಾಇ ಆಶಾಭಾವನೆಗಳಿಗೆ ಧಕ್ಕೆ ತರದಂತೆ ನಡೆಯಬೇಕು. ಗುರುಗಳು ನೀಡುವ ಶಿಕ್ಷಣವನ್ನು ಸರಿಯಾಗಿ ಅರ್ಥೈಸಿಕೊಂಡು ಗುರಿಯತ್ತ ಸಾಗಬೇಕು ಎಂದರು.
ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದು ಐಟಿಐಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸುಕನ್ಯಾ ಗುಮಗೊಳಮಠ, ವಿದ್ಯಾ ಹಿರೇಮಠ, ಬಿ.ಎ. ತಡಕೋಡ, ಮಹೇಶ ಬಡಿಗೇರ, ಅಶೋಕ ಜಿಗಳೂರ, ಸೋಮಶೇಖರ ಲಿಂಗದಳ್ಳಿ, ವಿಶಾಲ ಭಜಂತ್ರಿ, ಚಂದ್ರು ಬಡಿಗೇರ, ಇತರರು ಇದ್ದರು.
ವಿನಾಯಕ ಗವಳಿ ವಂದಿಸಿದರು. ಮಂಜುನಾಥ ಚಟ್ಟೇರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net