ವೃತ್ತಿ ಕೌಶಲ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ

07ydg01
Published on

ಯಾದಗಿರಿ: ವೃತ್ತಿ ಕೌಶಲ ಹೊಂದಿದವ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಅಲ್ಲದೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ಅಭಿಪ್ರಾಯಪಟ್ಟರು.

ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ವತಿಯಿಂದ ಅಂತಿಮ ವರ್ಷದ ಪದವಿ ಯುವಕರಿಗಾಗಿ ಆಯೋಜಿಸಿದ್ದ ಉದ್ಯೋಗ ಭರವಸೆ ಕಾಯರ್ಾಗಾರ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರು ಸ್ಥಳಿಯವಾಗಿಯೇ ನೌಕರಿ ಬೇಕು ಎನ್ನುವ ಮನಸ್ಥಿತಿಯಿಂದ ಹೊರ ಬರಬೇಕು. ಪ್ರಪಂಚ ವಿಶಾಲವಾಗಿದ್ದು, ಬುದ್ಧಿ ಚಾತುರ್ಯ ಹೊಂದಿದವ ಎಲ್ಲಿಯಾದರೂ ಸ್ವತಂತ್ರವಾಗಿ ಬದುಕುತ್ತಾನೆ ಎಂದು ಮಾಮರ್ಿಕವಾಗಿ ನುಡಿದರು.

ಬಹಳಷ್ಟು ಯುವಕರು ಪದವಿ ಶಿಕ್ಷಣ ಹೊಂದಿದ ಕೂಡಲೇ ಉದ್ಯೋಗ ಸಿಗಲಿದೆ ಎಂದು ಬಯಸುವದು ಸಹಜ. ತಮ್ಮೂರಿನಲ್ಲಿ ಉದ್ಯೋಗವಕಾಶಗಳು ಕಮ್ಮಿ ಇವೆ ಎಂದು ಗೊತ್ತಿದ್ದರೂ ಕಾಲಹರಣ ಮಾಡುವುದು ಸರಿಯಲ್ಲ. ಈ ಮನಸ್ಥಿತಿಯಿಂದ ಹೊರಬಂದು ಎಲ್ಲಿಯಾದರೂ ಸರಿ ದೊರೆತ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು ಎಂದರು.

ಪದವಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಪ್ರಾಮಾಣಿಕವಾಗಿ ಮತ್ತು ಶೃದ್ಧೆಯಿಂದ ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ಫಲ ದೊರೆಯುತ್ತದೆ. ಜತೆಗೆ ಪ್ರತಿಭೆಗೆ ಪುರಸ್ಕಾರ ಖಂಡಿತವಾಗಿ ಲಭಿಸುತ್ತದೆ. ಇದರ ಜತೆಯಲ್ಲಿ ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಪ್ರೊ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ದೇಶಪಾಂಡೆ ಫೌಂಡೇಶನ್ಗೆ ಕಾಲೇಜಿನ ವಿದ್ಯಾಥರ್ಿಗಳು ತೆರಳಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇಂಥ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಜೀವನದಲ್ಲಿ ಇಟ್ಟುಕೊಂಡ ಗುರಿ ಸಾಸಬೇಕು ಎಂದು ಹೇಳಿದರು.

ಎಚ್ಡಿಎಫ್ಸಿ ಬ್ಯಾಂಕ್ ವ್ಯವಸ್ಥಾಪಕ ಸದಾನಂದ ಪಾಟೀಲ, ನವೀನ್ ಜೋಷಿ ಮತ್ತು ಉದ್ಯೋಗ ಕೋಶಾಕಾರಿ ಪಂಪಾಪತಿ ಪಾಟೀಲ ಮತ್ತು ಶಹನಾಜ್ ಬೇಗಂ ಇದ್ದರು. ಸಂಪನ್ಮೂಲ ವ್ಯಕ್ತಿಗಳಾದ ರಂಜಿತಾ, ಅಭಿನಂದನ, ರಾಜಾ ಮಹ್ಮದ್ ನಡೆಸಿಕೊಟ್ಟರು. ಪ್ರಹ್ಲಾದ ಜೋಷಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net