ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಿ

24mdl01
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 162.06194;aec_lux_index: 0;albedo: ;confidence: ;motionLevel: 0;weatherinfo: null;temperature: 39;
Published on

ಮುದಗಲ್: ಪಟ್ಟಣದ ಮಸ್ಕಿ ಮತ್ತು ತಾವರಗೇರಾ ಮಾರ್ಗದ ಹತ್ತಿರವಿರುವ ವೃತ್ತಕ್ಕೆ ಹಜರತ್ ಟಿಪ್ಪು ಸುಲ್ತಾನ್ ವೃತ್ತವೆಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿ ಪುರಸಭೆ ವ್ಯವಸ್ಥಾಪಕ ಸುರೇಶ ಹೊನ್ನಹಳ್ಳಿಗೆ ತೆಹ್ರಿಕ್-ಇ-ಟಿಪ್ಪು ಸುಲ್ತಾನ್ ಸಂಘಟನೆಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಭಾರತದ ಪ್ರಥಮ ಸ್ವಾತಂತ್ರ್ಯ ಸೇನಾನಿ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟು ಹೋರಾಡಿದ ಹಜರತ್ ಟಿಪ್ಪು ಸುಲ್ತಾನ್ ಹೆಸರಿಲ್ಲಿ ಮುದಗಲ್‌ನಲ್ಲಿ ವೃತ್ತ ಇಲ್ಲ. ಈ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಮಸ್ಕಿ ಮತ್ತು ತಾವರಗೇರಾ ಮಾರ್ಗದಲ್ಲಿರುವ ವೃತ್ತಕ್ಕೆ ಹಜರತ್ ಟಿಪ್ಪು ಸುಲ್ತಾನ್ ವೃತ್ತವೆಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಲಾಯಿತು.

ಮುದಗಲ್ ಘಟಕದ ಕಾರ್ಯದರ್ಶಿ ಅಲ್ತಾಫ್ ಕಡ್ಡಿಪುಡಿ, ಖಾಜಾ ಸಾಬ ಮಂಡಿ, ರಹೀಮ್ ಷಾ ಮಕಾಂದಾರ್, ಸಾಬೀರ್, ಅಬ್ದುಲ್ ಮಜೀದ್ ನಾಸೀರ ಪಾಷಾ, ಮುನ್ನಾ, ಇಸ್ಮಾಯಿಲ್ ಡೋಯಿ, ಸುಭಾನ್, ಮುರ್ತುಜಾ ಶೇಕ್ ಚಾಂದ್, ಜಲಾಲ್, ವಸೀಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net