ವುಡ್ ಇಂಡಸ್ಟ್ರಿಯಲ್ಲಿದ್ದ ಅಕ್ರಮ ಕಟ್ಟಿಗೆ ವಶ

23-ylp-03-forest.jpg
Published on

ಯಲ್ಲಾಪುರ:ಅನಧಿಕೃತವಾಗಿ ಕಟ್ಟಿಗೆ ದಾಸ್ತಾನು ಇಟ್ಟ ವುಡ್ ಇಂಡಸ್ಟ್ರಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಟ್ಟಿಗೆ ವಶಪಡಿಸಿಕೊಂಡ ಘಟನೆ ಪಟ್ಟಣದ ತಳ್ಳಿಕೇರಿಯಲ್ಲಿ ನಡೆದಿದೆ.

ತಳ್ಳಿಕೇರಿಯ ಅಮಾನ್ ವುಡ್ ಇಂಡಸ್ಟ್ರಿಯಲ್ಲಿ ಸಾಗವಾನಿಯ 6 ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಕಟ್ಟಿಗೆ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇಂಡಸ್ಟ್ರಿಯ ಮಾಲೀಕ ಹಸನ್ ಸಾಬ ಕಾನಳ್ಳಿ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net