ವೀರೇಂದ್ರ ಹೆಗಡೆ ನೋಂದವರ ಬಾಳಿನ ಬೆಳಕು: ನರಸಮ್ಮ

IMG-20230917-WA0007
Published on

ಚಿಂಚೋಳಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವರ ಕೃಪೆ ಹಾಗೂ ಶ್ರೀ ವಿರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಚಿಂತನೆಯಿಂದಾಗಿ ಕ್ಷೇತ್ರದ ಲಕ್ಷಾಂತರ ಜನರಿಗೆ ದಾರಿ ದೀಪವಾಗಿದ್ದಾರೆ ಎಂದು ಶ್ರೀ ಧರ್ಮಸ್ಥಳ ಸಂಸ್ಥೆಯ ಕಲಬುರ್ಗಿ ಜಿಲ್ಲಾ ಜನಜಾಗೃತಿ ಉಪಾಧ್ಯಕ್ಷೆ, ಸ್ತ್ರೀ ಶಕ್ತಿ ಸ್ವಸಹಾಯ ಒಕ್ಕೂಟದ ಅಧ್ಯಕ್ಷೆ ನರಸಮ್ಮ ಆವಂಟಿ ಹೇಳಿದರು.

ಪಟ್ಟಣದ ಶ್ರೀ ಧರ್ಮಸ್ಥಳ ಸಂಸ್ಥೆಯು ಶನಿವಾರದಂದು ಹಮ್ಮಿಕೊಂಡ ಸುಜ್ಞಾನ ನಿಧಿ ಯೋಜನೆ ಅಡಿ ಬೇಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವ ಸಹಾಯ ಸಂಘಗಳ ಗುಂಪಿನ ಬಡವರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಗೆ ಮುಂದಾಗಿ ಶಿಷ್ಯ ವೇತನ ನೀಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕಿನ 40 ಕ್ಕೂ ಅಧಿಕ ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯ ವೇತನ ಮಂಜೂರಿ ಗೊಂಡಿದ್ದು, ಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆದು ಬಡತನದಿಂದ ಹೊರ ಬರಲು ಸಂಸ್ಥೆಯ ಅಳಿಲು ಸೇವೆ ಯಾರು ಮರೆಯುವಂತಿಲ್ಲ. ಪ್ರತಿಯೊಬ್ಬರು ಇಂತಹ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಯೋಜನಾಧಿಕಾರಿ ಗೋಪಾಲ, ವ್ಯವಸ್ಥಾಪಕ ಶರಣಪ್ಪ, ನೋಡಲ ಅದಿಕಾರಿಸಂಗಮೇಶ್, ಮೇಲ್ವಿಚಾರಕಿ ಮಾಲಾಶ್ರೀ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಫಲಾನುಭವಿಗಳು ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net