

ಕಲಬುರಗಿ: ನಗರದಲ್ಲಿ ನಿರ್ಮಿಸುತ್ತಿರುವ ವೀರಶೈವ ಲಿಂಗಾಯತ ಮಹಿಳಾ ವಸತಿ ನಿಲಯ ಕಾಮಗಾರಿಯ ಗುತ್ತಿಗೆಯನ್ನು ಲಿಂಗಾಯತರಿಗೆ ವಹಿಸಿಕೊಡದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅವರ ನಡೆ ಎಲ್ಲರಿಗೂ ಅಚ್ಚರಿ ತರಿಸಿದೆ, ಇದು ಸಮಾಜ ವಿರೋಧಿ ನಡೆಯಾಗಿದೆ ಎಂದು ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರು ಆಗಿರುವ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ಆರೋಪಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಮೋದಿ ನಡೆಗೆ ಅಸಮಾಧಾನ ಭುಗಿಲೆದಿದ್ದೆ, ಸಮಾಜದ ಮುಖಂಡರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು, ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಾಸ್ಟೇಲ್ ಕಟ್ಟಡಕ್ಕೆ ಹಣ ಬರುವುದು ವೀರಶೈವ ಮಹಾಸಭಾ ಸದಸ್ಯರಿಂದ ಮತ್ತು ಲಿಂಗಾಯತ ಮಾಜಿ ಹಾಲಿ ಜನಪ್ರತಿನಿಧಿಗಳು, ಉದ್ಯಮಿಗಳು, ಸಮಾಜ ಮುಖಂಡರಿಂದ. ಆದರೆ, ಹಾಸ್ಟೇಲ್ ಗುತ್ತಿಗೆ ಲಿಂಗಾಯತರಿಗೆ ನೀಡದೆ, ಅಧ್ಯಕ್ಷರು ತಮ್ಮ ಸ್ನೇಹಿತರಿಗೆ ನೀಡಿರುವುದರಿಂದ ತರವಲ್ಲ. ನಮ್ಮ ಸಮಾಜದವರೆ ಕೆಲಸ ಮಾಡಲಿ ಎಂದು ಆಗ್ರಹಿಸಿದರು. ಇದರಿಂದಾಗಿ ಹೊಸಬರು ಮಹಾಸಭಾ ಸದಸ್ಯರಾಗುತ್ತಿಲ್ಲ, ಮೊದಲಿನವರು ನಮಗೆ ಸದಸ್ಯತ್ವ ಬೇಡ, ಹಣ ಮರಳಿ ಎನ್ನುತ್ತಿದ್ದಾರೆ ಎಂದು ನರಿಬೋಳ ತಿಳಿಸಿದರು.
ಶರಣು ಮೋದಿಯವರ ಅನುಮತಿ ಇಲ್ಲದೆ ಪತ್ರಿಕೆಗಳಿಗೆ ಹೇಳಿ ನೀಡಬಾರದು ಎನ್ನುತ್ತಾರೆ. ಅಧ್ಯಕ್ಷರು ಏನು ಮಾಡಿದರೂ ನಡೆಯುತ್ತದೆಯೇನು ಎಂದು ಪ್ರಶ್ನಿಸಿದರು. ಯುವ ಘಟಕಗಳಿಗೆ ಪದಾಧಿಕಾರಿಗಳ ಗಮನಕ್ಕೆ ತರದೇ ತಾವೆ ನೇಮಕ ಮಾಡುತ್ತಿದ್ದಾರೆ. ವಿಚಿತ್ರವೆಂದರೆ ಪ್ರಧಾನ ಕಾರ್ಯದಶರ್ಿಗಳ ಆದೇಶದ ಮೇರೆಗೆ ನೇಮಕ ಮಾಡಿದ್ದೇನೆಂದು ಪತ್ರ ನೀಡಿರುವುದು ನಾವು ಎಲ್ಲಿಯೂ ಕೇಳಿಲ್ಲ. ಇದೂ ಕೂಡ ಮಹಾಸಭೆಗೆೆ ಅಗೌರವವಾಗಿದೆ ಎಂದರು.ಮಹಾಸಭಾಗೆ ಗೌರವಾಧ್ಯಕ್ಷನಾಗಿ ಪೂಜ್ಯರನ್ನು ನೇಮಿಸಬೇಕೆಂದು ವರ್ಷದಿಂದ ಒತ್ತಾಯ ಮಾಡುತ್ತಿದ್ದರೂ, ಮಾಡುತ್ತಿಲ್ಲ. ಹೀಗಾಗಿ ನೂತನ ಅದ್ಯಕ್ಷರನ್ನು ಮರಳಿ ಆಯ್ಕೆ ಮಾಡಲು ನಡೆಸುವುದೆ ಸೂಕ್ತವಾಗಿದೆ. ಈ ಸಮಸ್ಯೆ ಪರಿಹಾರವಾಗಲು ಎಲ್ಲ ಹಿರಿಯರು ಸೇರಿ ಚುನಾವಣೆ ನಡೆಸಲು ಕೇಂದ್ರ ಸಮಿತಿ ಮೇಲೆ ಒತ್ತಡ ಹೇರಲು ಮನವಿ ಮಾಡಿದರು. ಈ ಕುರಿತು ಸಮಾಜದ ಹಿರಿಯನ್ನು ಭೇಟಿ ಮಾಡಲಾಗುವುದು. ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಮಹಾಸಭಾ ಕೇಂದ್ರ ಕಚೇರಿ ಎದುರು ಹೋರಾಟ ಮಾಡುವುದು ಅಲ್ಲದೆ ಹಂತ ಹಂತದ ಹೋರಾಟ ಮಾಡಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.