ವೀರಶೈವ ಸಜ್ಜನ ಸಂಘದಿಂದ ಸೆ.13ರಂದು ಆರೋಗ್ಯಶಿಬಿರ

Published on

ಮೈಸೂರು: ಎನ್‌ಜೆಎಸ್ ಚಾರಿಟಬಲ್ ಟ್ರಸ್ಟ್, ಮೈಸೂರು ವೀರಶೈವ ಸಜ್ಜನ ಸಂಘದಿಂದ ಸೆ.13ರಂದು ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಮಂಡಿ ಮೊಹಲ್ಲಾದ ಪೊಲೀಸ್ ಠಾಣೆ ಬಳಿ ಇರುವ ಕಂಠಿ ಮಲ್ಲಣ್ಣನವರ ಕಲ್ಯಾಣಮಂದಿರದಲ್ಲಿ ಅಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2. ಗಂಟೆ ವರಗೆ ಹೃದಯ, ಚರ್ಮ, ಕಣ್ಣು, ಹಲ್ಲು, ಯೋಗ, ಪ್ರಾಣ ವಿದ್ಯಾ ಶಿಬಿರ, ಮೂಳೆ, ಅಜೀರ್ಣ, ಶ್ವಾಸಕೋಶ, ಮೈಗ್ರೇನ್, ಮಕ್ಕಳು, ಸ್ತ್ರೀರೋಗ ಸೇರಿದಂತೆ ಹಲವು ಸಮಸ್ಯೆಗಳನ್ನು ಪರೀಕ್ಷಿಸಲಾಗುವುದು. ಮಾಹಿತಿಗೆ ಮೊಬೈಲ್ ಸಂಖ್ಯೆ 9916155453 ಅನ್ನು ಸಂಪರ್ಕಿಸುವಂತೆ ಶಿಬಿರದ ಆಯೋಜಕರಾದ ಎಂ.ಎನ್.ಜೈಪ್ರಕಾಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net