

ವಿಜಯವಾಣಿ ಸುದ್ದಿಜಾಲ ಧಾರವಾಡ
ಇತ್ತೀಚೆಗೆ ಅಗಲಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟಿçÃಯ ಉಪಾಧ್ಯಕ್ಷ ಹಾಗೂ ಮÁಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರಿಗೆ ನಗರದ ಲಿಂಗಾಯತ ಭವನದಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾ¬ತು.
ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಮಾತನಾಡಿ, ಅಂಬಡಗಟ್ಟಿ ಅವರ ಸರಳ, ಸಜ್ಜನ ವ್ಯಕ್ತಿತ್ವ ಸ್ಮರಣೀಯ. ಶಾಸಕರಾಗಿ ಕಾರ್ಯನಿರ್ವಹಿಸಿದರೂ ಧಾರವಾಡದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳಲಿಲ್ಲ. ಸದಾ ಜನಸಾಮÁನ್ಯರ ಮಧ್ಯೆ ಇದ್ದು, ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತ ಬಂದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸೇರಿದಂತೆ ಅನೇಕ ಸಂಘ- ಸಂಸ್ಥೆಗಳ ಜೊತೆ ಒಡನಾಟ ಇಟ್ಟುಕೊಂಡು ಸಮÁಜ ಸೇವೆಗೈದರು. ಜೀನದುದ್ದಕ್ಕೂ ಮೌಲ್ಯಗಳನ್ನು ಪಾಲಿಸಿ ಇತರರಿಗೆ ಆದರ್ಶರಾದರು ಎಂದು ಸ್ಮರಿಸಿದರು.
ಪಿ.ಎಚ್. ನೀರಲಕೇರಿ, ಬಿ.ಎಸ್. ಗೋಲಪ್ಪನವರ, ಸಿದ್ದಣ್ಣ ಕಂಬಾರ, ಮಲ್ಲನಗೌಡ ಪಾಟೀಲ, ಬಿ.ವೈ. ಪಾಟೀಲ, ಪ್ರಭಾವತಿ ಒಡ್ಡಿನ, ಶಂಕರ ಕುಂಬಿ, ಡಾ. ರಾಮು ಮೂಲಗಿ, ವಿಜಯಲಕ್ಷಿ÷್ಮÃ ಕಲ್ಯಾಣಶೆಟ್ಟರ, ಪಾರ್ವತಿ ಹಾಲಭಾವಿ, ರಾಜೇಂದ್ರ ಕಪಲಿ, ಶ್ರೀಶೈಲ ಕಮತರ, ಎಸ್.ಎಸ್. ಚಿಕ್ಕಮಠ, ಲಿಂಗರಾಜ ಕಮತರ, ಶಿವಾನಂದ ಶಿವಳ್ಳಿ, ಇತರರಿದ್ದರು.