ವೀರಶೈವ ಮಹಾಸಭಾ,25ರಂದು ಚುನಾವಣೆ

ctd000000
Published on

ಚಿತ್ರದುರ್ಗ: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ‌್ಯನಿರ್ವಾಹಕ ಸಮಿತಿ ಸಾಮಾನ್ಯ ಸದಸ್ಯರ ಆಯ್ಕೆಗೆ ಆ.25ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ನಗರದ ರೋಟರಿ ಬಾಲಭವನದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಟಿ.ಪಿ.ಜ್ಞಾನಮೂರ್ತಿ ತಿಳಿಸಿದ್ದಾರೆ.
ಸಮಿತಿಯ 27 ಸ್ಥಾನಗಳಿಗೆ ವಿವಿಧ ಜಿಲ್ಲೆಗಳಿಂದ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಹಾಸಭೆ ಉಪಪೋಷಕ ಹಾಗೂ ಮೇಲು ಹಂತದ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಿರುತ್ತಾರೆ. ಅದೇ ದಿನದಂದು ಮತಗಳ ಎಣಿಕೆ ನಡೆಯಲಿದ್ದು, ಎಲ್ಲ ಜಿಲ್ಲಾ ಮತ ಕೇಂದ್ರಗಳಿಂದ ವರದಿ ಪಡೆದ ಬಳಿಕ ಬೆಂಗಳೂರಲ್ಲಿರುವ ಮಹಾಸಭೆ ಕೇಂದ್ರ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳಿಂದ 438 ಸದಸ್ಯರು ಮತದಾನದ ಅರ್ಹತೆ ಹೊಂದಿದ್ದಾರೆ. ಚಿತ್ರದುರ್ಗ-238, ಚಳ್ಳಕೆರೆ -45, ಹಿರಿಯೂರು-27, ಹೊಳಲ್ಕೆರೆ-22, ಹೊಸದುರ್ಗ-49, ಮೊಳಕಾಲ್ಮೂರಲ್ಲಿ 57 ಮತದಾರಿದ್ದಾರೆ. ಅಂದು 6 ತಾಲೂಕುಗಳ ಮತದಾರರು ಚಿತ್ರದುರ್ಗದ ಮತಗಟ್ಟೆಯಲ್ಲಿ ಚಲಾಯಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ (944812255), ಜ್ಞಾನಮೂರ್ತಿ (9449974004) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net