ವೀರಶೈವ ಮಹಾಸಭಾ ಚುನಾವಣೆ ಜು.೨೧ಕ್ಕೆ

kadadi
Published on

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ 2024ರ ಚುನಾವಣೆ ನಾಮಪತ್ರ ಸ್ವೀಕಾರ ಜೂ.27ರಿಂದ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಪಚುನಾವಣಾಧಿಕಾರಿ ಎಸ್.ಎಂ ಕಾಡಾದಿ ತಿಳಿಸಿದರು.
ಜುಲೈ 21ರಂದು ಮತದಾನ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೂ.೨೭ರಂದು ನಾಮಪತ್ರ ಸ್ವೀಕಾರ, ಜುಲೈ ೪ರಂದು ನಾಮಪತ್ರ ಸ್ವೀಕರಿಸುವ ಕೊನೆಯ ದಿನವಾಗಿದೆ. ಜು.೫ರಂದು ನಾಮಪತ್ರ ಪರಿಶೀಲನೆ ಹಾಗೂ ಜು.೮ರ ಮಧ್ಯಾಹ್ನ ೩ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಸಮಿತಿಗೆ ಜು.೨೧ರಂದು ಮತದಾನ ನಡೆಯಲಿದೆ. ಅಂದೇ ಮತ ಎಣಿಕೆ ನಡೆಸಿ, Àಲಿತಾಂಶ ಪ್ರಕಟ ಮಾಡಲಾಗುವುದು. ಜಿ¯್ಲೆಯಲ್ಲಿ ಒಟ್ಟು ೬,೬೭೩ ಸದಸ್ಯರಿದ್ದು, ನಾಮಪತ್ರವನ್ನು ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿನ ಚುನಾವಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಮತದಾನ ನಡೆಸುವ ಸ್ಥಳವನ್ನು ಇನ್ನು ನಿಗದಿಪಡಿಸಿಲ್ಲ ಎಂದು ತಿಳಿಸಿದರು.
ಪ್ರಮುಖರಾದ ಅಶೋಕ ದೇಸಾಯಿ ಹಾಗೂ ಈಶ್ವರ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net