ವೀರರ ಆದರ್ಶ ರೂಢಿಸಿಕೊಳ್ಳಲಿ

16ckd1
Published on

ಚಿಕ್ಕೋಡಿ: ಸ್ವಾತಂತ್ರ‍್ಯಕ್ಕಾಗಿ ಮಡಿದ ವೀರರನ್ನು ಸ್ಮರಿಸಿ, ಅವರ ತತ್ತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟçದ ಪ್ರಗತಿಗೆ ಶ್ರಮಿಸಬೇಕು ಎಂದು ಕಾಡಾಪುರ ಸಿದ್ಧಾರೂಢ ಮಠದ ರಾಜಯೋಗಿ ನಾಗಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಯಕ್ಸಂಬಾದ ಶಿವಶಂಕರ ಜೊಲ್ಲೆ ಶಾಲೆಯಲ್ಲಿ ಶುಕ್ರವಾರ ೭೯ನೇ ಸ್ವಾತಂತ್ರ‍್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪಾಟ್ ಅಲಂಕಾರ, ರಂಗೋಲಿಯಲ್ಲಿ ವಿಜ್ಞಾನ ಚಿತ್ರಗಳ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳ ಅಲಂಕಾರ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಕ ವಿ.ಬಿ.ಖೋತ ಮಾತನಾಡಿದರು. ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಲಕ್ಷ್ಮಣ ಕಬಾಡೆ, ಬಾಬುರಾವ ಮಾಳಿ, ಅಪ್ಪಾಸಾಹೇಬ ಜೊಲ್ಲೆ, ಜಯಾನಂದ ಜಾಧವ, ಆನಂದ ಪಾಟೀಲ, ವಿಶ್ವನಾಥ ಪೇಟಕರ, ಮಂಗಲ ಜೊಲ್ಲೆ, ಪೈಮೀದಾ ದಾಡಿವಾಲೆ, ಸುಜಾತಾ ಕಬಾಡೆ, ಕಲ್ಲಪ್ಪ ಶರಣರು, ಸಂತೋಷ ಪಾಟೀಲ, ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಲಿ., ಯಕ್ಸಂಬಾ (ಮಲ್ಟಿಸ್ಟೇಟ್) ಹಾಗೂ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಸದಸ್ಯರು, ಉಪಪ್ರಧಾನ ವ್ಯವಸ್ಥಾಪಕರು ಇತರರಿದ್ದರು. ವಿ.ಆರ್.ಭಿವಸೆ ಸ್ವಾಗತಿಸಿದರು. ಅನನ್ಯಾ ಚೌಗಲೆ ನಿರೂಪಿಸಿದರು. ಪೂರ್ವಾ ವಾಲಿಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net