ವೀರಯೋಧರ ಭಾವಚಿತ್ರಕ್ಕೆ ಪುಷ್ಪ ನಮನ

14 gkp 02
Published on

ಗೋಣಿಕೊಪ್ಪ: ಪುಲ್ವಾಮಾ ದಾಳಿಯ ಕರಾಳ ದಿನವನ್ನು ಕಾವೇರಿ ಪದವಿ ಪೂರ್ವ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ವೀರಯೋಧರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ನೆನಪಿಕೊಳ್ಳಲಾಯಿತು.


ಪ್ರಾಂಶುಪಾಲ ಸಣ್ಣುವಂಡ ಎಸ್.ಮಾದಯ್ಯ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ದೇಶಕ್ಕಾಗಿ ಪ್ರಾಣ ಕಳೆದುಕೊಂಡರು. ಇದು ಭಾರತೀಯ ಇತಿಹಾಸದಲ್ಲಿ ಕರಾಳ ನೆನಪಾಗಿ ಉಳಿದಿದೆ. ಈ ದಿನವನ್ನು ದೇಶದೆಲ್ಲೆಡೆ ಹುತಾತ್ಮ ಯೋಧರನ್ನು ಸ್ಮರಿಸಲಾಗುತ್ತಿದೆ. ಭಾರತದ ಜನರು ಕಣ್ಣೀರಿಟ್ಟ ದಿನವಾಗಿದ್ದು, ರಾಷ್ಟ್ರದ ಸೇವೆ ಮತ್ತು ರಕ್ಷಣೆಗೆ ಮುಡಿಪಾಗಿಟ್ಟ ಹುತಾತ್ಮರನ್ನು ಭಾರತೀಯರು ಮರೆಯಲು ಸಾಧ್ಯವಿಲ್ಲ ಎಂದರು.


ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅಕ್ರಂ, ಕ್ಯಾಪ್ಟನ್ ಬ್ರೈಟಾಕುಮಾರ್, ಉಪನ್ಯಾಸಕರಾದ ಎಂ.ಕೆ.ಪದ್ಮಾ, ಎಂ.ಬಿ. ಪೂವಮ್ಮ, ನೀಲಮ್ಮ, ಸರಸ್ವತಿ, ಜೆಸಿಂತಾ, ಆಡಳಿತಾತ್ಮಕ ಸಿಬ್ಬಂದಿ ಕುಮಾರಿ, ವಾಣಿ, ವನಿತಾ, ಸುಬ್ಬಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net