

ಕಲಬುರಗಿ: ಶಿವನ ಉಗ್ರ ಸ್ವರೂಪವಾಗಿರುವ ಶ್ರೀ ವೀರಭದ್ರೇಶ್ವರ ದೇವರು ದಕ್ಷ ಬ್ರಹ್ಮನನ್ನು ಸಂಹರಿಸಲು ಭೂಮಿಗೆ ಉದ್ಭವಿಸಿದ ದಿನವಾದ ಭಾದ್ರಪದ ಮಾಸದ ಮೊದಲ ಮಂಗಳವಾರದAದು ವಿಶ್ವದೆಲ್ಲೆಡೆ ಏಕಕಾಲಕ್ಕೆ ಹಬ್ಬ ಆಚರಿಸಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ.ಶಿವಶರಣಪ್ಪ ಕೋರಿದ್ದಾರೆ. ಶಿವರಾತ್ರಿ, ದಸರಾ, ಲಕ್ಷಿö್ಮÃ, ಗಣೇಶ ಚತುರ್ಥಿ ಏಕಕಾಲಕ್ಕೆ ಒಂದೇ ದಿನ ಆಚರಿಸಲಾಗುತ್ತದೆ. ಅದೇ ಮಾದರಿಯಲ್ಲಿ ಶ್ರೀ ವೀರಭದ್ರೇಶ್ವರರ ಹಬ್ಬವನ್ನು ಆಚರಿಸಬೇಕು. ಭಾರದ ಸೇರಿ ವಿಶ್ವದ ವಿವಿಧೆಡೆ ವೀರಭದ್ರೇಶ್ವರರ ದೇವಸ್ಥಾನಗಳಿದ್ದು, ಕೋಟ್ಯಂತರ ಭಕ್ತರಿz್ದÉÃವೆ. ಎಲ್ಲೆಡೆ ಜಾತ್ರೆ, ಆಚರಣೆ ನಡೆಯುತ್ತವೆ. ಶಿವನ ಜಡೆಯಿಂದ ಭೂಮಿಯಿಂದ ವೀರಭದ್ರೇಶ್ವರರು ಭಾದ್ರಪದ ಮಾಸದ ಮೊದಲ ಮಂಗಳವಾರ ದರೆಗಿಳಿದಿದ್ದು, ಅಂದೇ ಹಬ್ಬ, ಜಯಂತಿ ಆಚರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.