

ಸಂಡೂರು: ತಾಲೂಕಿನ ಜೋಗ ಗ್ರಾಮದ ವೀರಭದ್ರೇಶ್ವರ ಸ್ವಾಮಿಯ ನೂತನ ದೇವಾಲಯ ಹಾಗೂ ಶಿಲಾಮೂರ್ತಿ ಮಂಗಳವಾರ ಲೋಕಾರ್ಪಣೆಗೊಂಡಿತು. ಗೋಪುರಕ್ಕೆ ಕಳಸರೋಹಣ ಜತೆಗೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹರಿಗಿನ ದೋಣಿಯ ಪಂಚವಣಿಗೆ ಸಂಸ್ಥಾನ ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾನ್ನಿಧ್ಯದಲ್ಲಿ ಅಹೋರಾತ್ರಿ ಹೋಮ, ಗಣಪತಿ ಪೂಜೆ, ವಾಸ್ತು ಪೂಜೆ, ಮೃತ್ಯುಂಜಯ ಪೂಜೆ, ಗಂಗಪೊಜೆ ನಡೆದವು. ಮಂಗಳವಾಧ್ಯ, ವೀರಗಾಸೆ, ಭಜನೆ ಕಾರ್ಯಕ್ರಮಗಳು ನಡೆದವು.
ವೀರಭದ್ರೇಶ್ವರ ಸ್ವಾಮಿಯ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಪೂಜಾ ಕೈಂಕರ್ಯಗಳು ನಡೆದವು. ನೂರಾರು ಭಕ್ತರು ದೇವರಿಗೆ ಹಣ್ಣು, ಕಾಯಿ, ಹೂ ಸಮರ್ಪಿಸಿ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಧರ್ಮಸಭೆಯಲ್ಲಿ ಹಗರಿಬೊಮ್ಮನಹಳ್ಳಿ ಮಠ ಹಾಲಸ್ವಾಮಿಗಳು, ವೆಂಕಟಾಪುರದ ಶ್ರೀಪುರತತ್ವಾನಂದರು, ಕಾಕುಬಾಳಿನ ವೇದಮೂರ್ತಿ ಎಚ್.ಎಮ್.ಷಡಕ್ಷರಯ್ಯತಾತ ಭಾಗವಹಿಸಿದ್ದರು.
ಜೋಗ ಗ್ರಾಮದ ವೀರಭದ್ರೇಶ್ವರ ಹಾಗೂ ಮಾರಮ್ಮ ದೇವಿ ಭಜನಾ ಮಂಡಳಿ ಸೇರಿ ಸಪ್ತ ಭಜನಾ ಕಾರ್ಯಕ್ರಮದಲ್ಲಿ ತಾಳೂರು, ವಡ್ಡು, ತೋರಣಗಲ್, ತಾರಾನಗರ, ಮುರಾರಿಪುರ, ಸಂಡೂರು, ಲಕ್ಷ್ಮೀಪುರ, ಹೊಸಪೇಟೆ ತಾಲೂಕಿನ ಕಾಕುಬಾಳು, ಗುಂಡ್ಲವದ್ದಿಗೇರಿ, ಬಯಲುವದ್ದಿಗೇರಿ ಮತ್ತಿತರ ಭಜನಾ ತಂಡಗಳಿಂದ ಅಹೋರಾತ್ರಿ ಸಪ್ತ ಭಜನಾ ಕಾರ್ಯಕ್ರಮ ನಡೆದವು.
ಜೋಗ ಗ್ರಾಮದ ಮಳೆಮಠದ ಜೆ.ಎಂ.ವೃಷಭೇಂದ್ರಯ್ಯ ಸ್ವಾಮಿ, ಜೆ.ಎಮ್.ರಾಜಶೇಖರಯ್ಯ, ಸೋಮಶೇಖರಯ್ಯ, ಸಾಲಿ ಸಿದ್ದಯ್ಯ ಸ್ವಾಮಿ, ಅರ್ಚಕರಾದ ಸಾಲಿ ವೀರಯ್ಯ, ರೇಣುಕಾರಾಧ್ಯ ಪುರೋಹಿತರು, ಶಂಭುಲಿಂಗಯ್ಯ ಸ್ವಾಮಿ ಹಿರೇಮಠ, ಚಂದ್ರಯ್ಯಸ್ವಾಮಿ ಹಿರೇಮಠ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಜೆ.ಎಂ.ಸೋಮಶೇಖರ ಸ್ವಾಮಿ ಜೋಗ, ಸಾಲಿ ಬಸವರಾಜ ಇತರರಿದ್ದರು.