ವೀರಭದ್ರೇಶ್ವರ ಭಕ್ತರಿಗೆ ಸೌಲಭ್ಯ ಒದಗಿಸಿ

VB Temple (8) (1)
Published on

ಹುಮನಾಬಾದ್: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ರಾಜ್ಯ ಸೇರಿ ಹೊರ ರಾಜ್ಯದ ಅಪಾರ ಭಕ್ತರು ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಆಯುಕ್ತರಿಗೆ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಹಾಯಕ ಆಯುಕ್ತ ಪ್ರಕಾಶ ಕುದ್ರಿ ಅವರೊಂದಿಗೆ ಮಂಗಳವಾರ ಭೇಟಿ ನೀಡಿ,ಪರಿಶೀಲಿಸಿ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆ ಹಣ ದುರುಪಯೋಗ ಆಗುತ್ತಿರುವ ಬಗ್ಗೆ ದೂರು ಬರುತ್ತಿದ್ದು, ನಿಗಾವಹಿಸುವಂತೆ ಆಡಳಿತ ಅಧಿಕಾರಿಗೆ ಸೂಚಿಸಿದರು.
ಭಕ್ತರಿಗೆ ಸೌಲಭ್ಯದ ಜತೆಗೆ ಪ್ರತಿನಿತ್ಯ ಅನ್ನದಾಸೋಹ ನಡೆಯಬೇಕು. ದೇವಸ್ಥಾನದ ಅಧೀನದಲ್ಲಿ ಬರುವ ಥೇರ್ ಮೈದಾನದ ಅಂಗಡಿಯವರ ದೂರು ಆಲಿಸಿದರು. ಸಹಾಯಕ ಆಯುಕ್ತ ಪ್ರಕಾಶ ಕುದರಿ ದೂರುಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು. ಶೀಘ್ರದಲ್ಲಿ ಮತ್ತೊಮ್ಮೆ ದೇವಸ್ಥಾನದ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಗ್ರೇಡ್ - ೨ ತಹಸೀಲ್ದಾರ್ ಮಂಜುನಾಥ ಪಂಚಾಳ, ಪ್ರಮುಖರಾದ ಬಸವರಾಜ ಆರ್ಯ, ಮಲ್ಲಿಕಾರ್ಜುನ ಸೀಗಿ, ಸಂತೋಷ ಪಾಟೀಲ್, ಸುನೀಲ ಪಾಟೀಲ್, ಗಿರೀಶ ಪಾಟೀಲ್, ವೈಜನಾಥ ಪಾಟೀಲ್, ಸಂತೋಷ ನಾವದಗಿ, ರಮೇಶ ಖೆರೋಜಿ, ಗೋಪಾಲಕೃಷ್ಣ ಮೋಹಳೆ, ಜ್ಞಾನದೇವ ನಿರಗುಡಿ, ಸುನೀಲ ಪತ್ರಿ, ಸಿದ್ದು ಸ್ವಾಮಿ, ನಾಗಭೂಷಣ ಸಂಗಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net