ಹುಬ್ಬಳ್ಳಿ: ಹಳೇಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿರುವ ಶರನ್ನವರಾತ್ರಿ ಉತ್ಸವದ ಶ್ರೀದೇವಿ ಪ್ರತಿಷ್ಠಾಪನೆ, ಶ್ರೀಶೈಲಪುತ್ರಿ ಆರಾಧನೆ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಎಂ.ವಿ. ಕರಮರಿ ನೆರವೇರಿಸಿದರು.
ಶ್ರೀ ವೀರಭದ್ರ ಸ್ವಾಮೀಜಿ ಅವರು ಶ್ರೀದೇವಿ ಪುರಾಣ ಆರಂಭಿಸಿದರು. ಪ್ರಮೋದ ಟಿಕಾರೆ ತಬಲಾ ಸಾಥ್ ನೀಡಿದರು.
ವೀರಭದ್ರಪ್ಪ ಕೆರೂರು, ಗಂಗಾಧರಯ್ಯ ಹಿರೇಮಠ, ಸೋಮಯ್ಯ ಹುಣಸಿಕಟ್ಟಿಮಠ ಅವರು ಬಗಳಾಂಬಿಕೆ ಸ್ತೋತ್ರ ಪಠಿಸಿದರು.
ಶಿವಪ್ಪ ಚೆನ್ನಿ, ಬಸವರಾಜ ಚಿಕ್ಕಮಠ, ಬಸವರಾಜ ಕಲ್ಯಾಣಶೆಟ್ಟರ್, ದತ್ತಾತ್ರೇಯ ಗಂಜಿ, ಇತರರು ಪಾಲ್ಗೊಂಡಿದ್ದರು. ನಿತ್ಯ ಸಂಜೆ 6ಕ್ಕೆ ಪ್ರವಚನ ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಶ್ರೀವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಶೇಖರ ಮಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಈರಣ್ಣ ಬಲೂಚಗಿ ಕಾರ್ಯಕ್ರಮ ನಿರೂಪಿಸಿದರು.