ವೀರಭದ್ರೇಶ್ವರ ಜಾತ್ರಾ ಮಹೋತ್ಸವ

a7f678e2-1b80-4385-baa7-24c81b8dc86e
ವೀರಭದ್ರೇಶ್ವರ ದೇವರu
Published on

ಬಾಗಲಕೋಟೆ: ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ಕಣವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಇದೇ 29 ರಿಂದ 31 ವರೆಗೆ ಜರುಗಲಿದ್ದು, ದಿನಾಂಕ 29 ಸಂಜೆ ಶ್ರೀ ವೀರಭದ್ರೇಶ್ವರ ಪಲ್ಲಕ್ಕಿ ಸೇವೆ ನಡೆಯಲಿದೆ.

30 ರಂದು ಭಾನುವಾರ ಬೆಳಗಿನ ಜಾವ ಚರಂತಿಮಠದ ಪೂಜ್ಯರಾದ ಪ್ರಭುಸ್ವಾಮಿಗಳ ಸನ್ನಿಧಿಯಲ್ಲಿ ಶ್ರೀ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರುತಿ, ಅಂದು ಸಂಜೆ 5 ಗಂಟೆಗೆ ಸಹಸ್ರಾರು ಭಕ್ತಾಧಿಗಳೊಡನೆ ಮಹಾರಥೋತ್ಸವ ಜರುಗಲಿದೆ, ದಿನಾಂಕ 31 ರಂದು ಸೋಮವಾರ ಸಾಯಂಕಾಲ 5 ಗಂಟೆಗೆ ಅಗ್ಗಿ ಉತ್ಸವ ನಡೆಯಲಿವೆ, ಜಾತ್ರಾಯ ನಿಮಿತ್ಯ ವೀರಭದ್ರೇಶ್ವರ ಸಾಂಸ್ಕೃತಿಕ ಭವನದಲ್ಲಿ ಬಿ.ವಿ.ವಿ.ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ.ಬಿವಿವಿಎಸ್ ಕೋಟಕ್ ಮಹಿಂದ್ರಾ ಬ್ಯಾಂಕ, ಆರ್ಸೆಟ್ ಸಂಸ್ಥೆ, ಜನ ಶಿಕ್ಷಣ ಸಂಸ್ಥೆ, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಮತ್ತು ಕಣವಿ ವೀರಭದ್ರೇಶ್ವರ ಟ್ರಸ್ಟ್ ಸಹಯೋಗದಲ್ಲಿ ದಿನಾಂಕ 29 ರಿಂದ 31 ವರೆಗೆ 3 ದಿನಗಳ ಕಾಲ 2025 ಕುಶಲ ಗ್ರಾಮ ಹಮ್ಮಿಕೊಳ್ಳಲಾಗಿದ್ದು, ಸ್ವಸಹಾಯ ಸಂಘಗಳ ಕುಶಲಕರ್ಮಿಗಳ ಮತ್ತು ಗ್ರಾಮ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಮಾರಟ ಮೇಳ ಜರುಗಲಿದೆ.  ಭಕ್ತಾಧಿಗಳು ಶ್ರೀ ಕಣವಿ ವೀರಭದ್ರೇಶ್ವರ ರಥೋತ್ಸವ ಮತ್ತು ಅಗ್ಗಿ ಉತ್ಸವಗಳಲ್ಲಿ ಭಾಗವಹಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೋಳಿಸಿರಿ ಎಂದು ಕಣವಿ ವೀರಭದ್ರೇಶ್ವರ ಟ್ರಸ್ಟ್ ಮತ್ತು ಜಾತ್ರಾ ಕಮೀಟಿಯ ಸದಸ್ಯರುಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net