ವೀರಭದ್ರೇಶ್ವರ ಕಲಶ ಮೆರವಣಿಗೆ ಸಂಪನ್ನ

Veerabhadreshwara Kalash procession complete
Veerabhadreshwara Kalash procession complete
Published on

ತೇರದಾಳ: ಪಟ್ಟಣದ ವೀರಭದ್ರೇಶ್ವರ ಕಲಶಾರೋಹಣ ಜೂ.6ರಂದು ನಡೆಯಲಿದ್ದು, ಬುಧವಾರ ಕಲಶ ಮತ್ತು ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆ ಸ್ಥಳೀಯ ಅಲ್ಲಮಪ್ರಭು ದೇವಸ್ಥಾನದಿಂದ ಹೊರಟು ಚಾವಡಿ ಮಾರ್ಗವಾಗಿ ದೇವಸ್ಥಾನದವರೆಗೆ ಸಂಭ್ರಮದಿಂದ ಜರುಗಿತು.

ಕುಂಭಮೇಳ, ಆರುತಿ, ಪುರವಂತರು ಸೇರಿ ಹಲವು ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಕರಡಿ ಮಜಲು ಸಾಂಪ್ರದಾಯಿಕ ವಾದ್ಯಮೇಳಗಳು ಮೆರವಣಿಗೆಗೆ ಕಳೆಕಟ್ಟಿದವು.

ಜೂ.6ರಂದು ಬೆಳಗ್ಗೆ 8 ಗಂಟೆಗೆ ಹಿರೇಮಠದ ಗಂಗಾಧರ ದೇವರಿಂದ ಕಲಶಾರೋಹಣ ಜರುಗುವುದು. ವಿಶೇಷ ಪೂಜೆ, ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ. ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ತವನಪ್ಪ ಮಾಟ, ನಿಂಗಪ್ಪ ಬೋಳಗೊಂಡ, ನಿಂಗಪ್ಪ ಮಾದಿಗೊಂಡ, ಈರಪ್ಪ ಬಡಿಗೇರ, ಬಾಹುಬಲಿ ಸವದತ್ತಿ, ನೇಮಿನಾಥ ಮಗದುಮ್, ಭೀಮು ಮಾದಿಗೊಂಡ, ಸಮ್ಮೇದ ಚವಜ, ಸುಭಾಸ ಮಾದಿಗೊಂಡ, ಶಂಕರ ಕುಂಬಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net