ವೀರಭದ್ರಸ್ವಾಮಿ ಗುಗ್ಗಳ 12ಕ್ಕೆ

Veerabhadraswamy
Published on

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಶ್ರೀ ನೀಲಕಂಠೇಶ್ವರ ಸ್ವಾಮಿ ದೇಗುಲದ ಮುಂಭಾಗ ಏ. 12ರಂದು ಬೆಳಗ್ಗೆ 6.30ಕ್ಕೆ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಮತ್ತು ಅಗ್ನಿಕುಂಡ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ವೀರಶೈವ ಸಮಾಜ, ಹರಪನಹಳ್ಳಿ ಪಟ್ಟಣದ ಮೇಗಳಪೇಟೆ ಗುಗ್ಗುಳ ವೀರಭದ್ರೇಶ್ವರ ದೇವಸ್ಥಾನ ಸಮಿತಿಯಿಂದ ಗುಗ್ಗುಳ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 7ಕ್ಕೆ ಗಂಗಾಪೂಜೆಯ ನಂತರ ಗುಗ್ಗಳದ ಮೆರವಣಿಗೆ ನಡೆಯಲಿದೆ.

ಉಜ್ಜಯಿನಿ ಮಠದಿಂದ ಆರಂಭವಾಗುವ ಮೆರವಣಿಗೆ ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತ ಮಾರ್ಗವಾಗಿ ಸಂಚರಿಸಿ ನೀಲಕಂಠೇಶ್ವರ ಸ್ವಾಮಿ ದೇಗುಲ ತಲುಪಲಿದೆ. ಅಗ್ನಿಕುಂಡ ಮಹೋತ್ಸವ, ಮಹಾಮಂಗಳಾರತಿ ನಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.

ಗುಗ್ಗಳ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಾಗುವ ಮಾರ್ಗಗಳಲ್ಲಿ ನೀರೆರಚುವ ಮೂಲಕ ಸ್ವಾಗತಿಸಬೇಕು ಎಂದು ವೀರಶೈವ ಸಮಾಜ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net