

ಶಹಾಪುರ : ಎರಡು ದಶಕ ಭಾರತೀಯ ಸೇನೆ (ಬಿಎಸ್‌ಎï)ಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಗುರುವಾರ ನಗರಕ್ಕೆ ಆಗಮಿಸಿದ ತಾಲೂಕಿನ ಚಾಲನಾಳ ಗ್ರಾಮದ ವೀರ ಯೋಧ ಅಮೋಘ ಸಿದ್ದಪ್ಪ ಅವರಿಗೆ ಗುರುವಾರ ನಾಗರಿಕರಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ಅಮೋಘ ಅವರು ಬಿಎಸ್‌ಎïನಲ್ಲಿ ೨೧ ವರ್ಷ ಸೇವೆ ಸಲ್ಲಿಸಿದ್ದಾರೆ. ನಗರಕ್ಕೆ ಬರುತ್ತಿದ್ದಂತೆ ಇಲ್ಲಿನ ಸಿಬಿ ಕಮಾನ್ ಮೂಲಕ ಬಸವೇಶ್ವರ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಕನ್ನಡಪರ ಸಂಘಟಕರು, ನಿವಾಸಿಗಳು, ನಿವೃತ್ತ ಶಿP್ಷÀಕರು, ಯುವಕರು ಹೂ ಮಾಲೆ ಹಾಕಿ ರಾಷ್ಟçಧ್ವಜ ಹಿಡಿದು ಸಂಭ್ರಮಿಸಿ ಸ್ವಾಗತಿಸಿದರು.
ಸಗರ ಗ್ರಾಮದ ಬಿಎಸ್‌ಎï ಯೋಧ ದುರ್ಗಪ್ಪ ನಾಯಕ ಮಾತನಾಡಿ, ದೇಶ ಸೇವೆ ಮಾಡಿ ಮರಳಿ ಸ್ವಗ್ರಾಮಕ್ಕೆ ಬರುವ ನಮ್ಮಂಥ ಸೈನಿಕರನ್ನು ನಾಗರಿಕರು ಅಭಿಮಾನದಿಂದ ಸ್ವಾಗತಿಸಿ ಸಂಭ್ರಮಿಸಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಅದೇ ರೀತಿ ತಾಲೂಕು ಆಡಳಿತ ನಿವೃತ್ತಿ ಹೊಂದಿ ಮರಳಿ ಸ್ವಗ್ರಾಮಕ್ಕೆ ಆಗಮಿಸುವ ಎಲ್ಲ ಯೋಧರಿಗೆ ಸರ್ಕಾರಿ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ. ಸಾಕಷ್ಟು ಕಡೆ ಸೈನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವ ಸ್ಥಿತಿ ಬಂದಿದೆ ಎಂದರು.
ರೋಜಾ ಮಲ್ಲಿಕಾರ್ಜುನ ಮುತ್ಯಾ, ಪಿಐ ಚನ್ನಯ್ಯ ಹಿರೇಮಠ, ನಿವೃತ್ತ ದೈಹಿಕ ಶಿP್ಷÀಕ ಸುಧಾಕರ ಗುಡಿ, ಸೋಮಶೇಖರ ಹಿರೇಮಠ, ಯುವ ಮುಖಂಡ ಭೀಮಣ್ಣ ಶಖಾಪುರ, ಸಿದ್ದು ಪಟ್ಟೇದಾರ ಇದ್ದರು.