ವೀರ ಪರಂಪರೆಯ ಮಹಾರಾಣಾ ಪ್ರತಾಪಸಿಂಹ

9-5hbd1
Published on

ಹುಮನಾಬಾದ್: ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ರಕ್ಷಣೆಯಲ್ಲಿ ತನ್ನ ಪ್ರಾಣ ಪಣಕ್ಕಿಟ್ಟು ಶೂರ ವೀರರ ಪರಂಪರೆಯಲ್ಲಿ ಹೆಸರು ಮಾಡಿದ, ಮೊಘಲರ ಸೊಕ್ಕನ್ನಡಗಿಸಿದ ಅಪ್ರತಿಮ ಹೋರಾಟಗಾರ ಮಹಾರಾಣಾ ಪ್ರತಾಪ್​ಸಿಂಹ ಪ್ರಾತಃಸ್ಮರಣೀಯರು ಎಂದು ವಿದ್ಯಾವತಿ ಭೀಮರಾಯ ಪಾಟೀಲ್ ನುಡಿದರು.
ಪಟ್ಟಣದ ಮುರಘಾಮಠ ಹತ್ತಿರ ರಜಪೂತ ಸಮಾಜದಿಂದ ಶನಿವಾರ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಏರ್ಪಡಿಸಿದ್ದ ಮಹಾರಾಣಾ ಪ್ರತಾಪ್ರವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧೈರ್ಯ ಹಾಗೂ ಶೂರತನಕ್ಕೆ ಹೆಸರಾಗಿದ್ದ ರಾಷ್ಟ್ರವೀರ ಮಹಾರಾಣಾ ಪ್ರತಾಪ್ ಸಿಂಗ್ ಯುವಕರಿಗೆ ಮಾದರಿ. ಸಮಾಜ ಸುಧಾರಕರು, ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಒಂದು ಸಮಾಜ ಆಚರಿಸುವುದಕ್ಕಿಂತ ಎಲ್ಲ ಸಮುದಾಯಗಳು ಒಗ್ಗೂಡಿ ಆಚರಿಸಬೇಕು ಎಂದರು.
ಸಮಾಜದ ಅಧ್ಯಕ್ಷ ಕಲಾವತಿಬಾಯಿ ಠಾಕೂರ ಮಾತನಾಡಿ. ಮೊಘಲರ ದಬ್ಬಾಳಿಕೆಯನ್ನು ದಿಟ್ಟತನದಿಂದ ಎದುರಿಸಿದ ರಾಷ್ಟ್ರವೀರ ಮಹಾರಾಣಾ ಪ್ರತಾಪ್ ಅವರು ರಾಷ್ಟ್ರದ ಆಸ್ತಿ. ಹಿಂದೂ ಸಮಾಜದ ರಕ್ಷಕರಾಗಿದ್ದರು. ದೇಶದ ರಜಪೂತರ ಬಗ್ಗೆ ಗೌರವ ಮೂಡುವಂತೆ ಮಾಡಿದವರು. ಶೌರ್ಯ, ಪರಾಕ್ರಮದ ಭಾರತದ ರಾಜರ, ಮಹಾಪುರುಷರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು. ಅವರ ಪರಾಕ್ರಮ, ಸಾಧನೆ, ಧೈರ್ಯ, ಶೌರ್ಯ, ಕೌಶಲ, ಸಾಹಸ ಛಲ ಇಂದಿನ ಮಕ್ಕಳಿಗೆ ಕಲಿಸುವುದು ಅವಶ್ಯ ಎಂದರು.
ವಿದ್ಯಾವತಿ ಪಾಟೀಲರಿಗೆ ಸಮಾಜದಿಂದ ಖಡ್ಗ ನೀಡಿ ಸನ್ಮಾನಿಸಲಾಯಿತು. ವಿಮಲಾಬಾಯಿ ಪ್ರಸಾದ, ಮುನ್ನಾಬಾಯಿ ಮನೋಹರ ಪ್ರಸಾದ, ರಾಧಾಬಾಯಿ ಗುಂಡುಸಿಂಗ, ನಾಗೇಸಿರಾ ಜವಹಾರಲಾಲ, ಅನೀತಾ ಸಂಜುಸಿಂಗ್, ಸಿಂಧು ಗಣೇಶ ಪ್ರಶಾದ್, ಸುನೀತಾ ಬಾಲಾಜಿ, ಸರಿತಾ ರವಿಸಿಂಗ್, ಲಕ್ಷ್ಮಿ ಶ್ರಾವಣ, ಪಾರ್ವತಿ ಗೋವಿಂದಸಿಂಗ್, ಸುಧಾ ಸುರೇಶ, ಮಂಗಲಸಿಂಗ್, ಸಾವನ, ಸುನೀಲ್, ಪ್ರೇಮಾ ತಿವಾರಿ, ಮೋಹನ ತಿವಾರಿ, ಅಣ್ಣಪೂರ್ಣ ಗಬ್ಬರಸಿಂಗ್, ಶಕುಂತಲಾ ಶಾಮಲಾಲ, ಲತಾ ಅಮರಸಿಂಗ್, ಅನೀತಾ ದೇವಿಸಿಂಗ್, ಜೈಯಶ್ರೀ ಸುಂದರಪ್ರಸಾದ, ಈರಮ್ಮ ಕೀಶನ ಪ್ರಸಾದ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net