

ಕಲಬುರಗಿ: ಮುಂದಾಲೋಚನೆ, ಭವಿಷ್ಯದ ಚಿಂತನೆ ಇಲ್ಲದಕ್ಕೆ ಕೋವಿಡ್ ವೇಳೆ ಎಲ್ಲೆಡೆ ಕೋಟ್ಯಂತರ ಜನರು ಉಪವಾಸದಲ್ಲಿದ್ದರು. ಆದ್ದರಿಂದ ಮುಂದೆ ಎದುರಾಗಬಹುದಾದ ಸವಾಲುಗಳ ಬಗ್ಗೆ ವಿಸ್ತÈತ ಮತ್ತು ಮುಂಚಿತ ಯೋಜನೆಗಳನ್ನು ಇಟ್ಟುಕೊಂಡರೆ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ಪಶ್ಚಿಮ ಬಂಗಾಳದ ಶಿಬಪುರ್ ಐಐಇಎಸ್‌ಟಿ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ ಹೇಳಿದರು.
ನಗರದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿAಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಇರಬೇಕು. ಜಾಗತಿಕ ಮಟ್ಟದಲ್ಲಿ ಹೊಸ ಸವಾಲು ಸೃಷ್ಟಿಯಾಗುತ್ತಿದ್ದು, ಹೊಸ ತಂತ್ರಜ್ಞಾನಗಳ ಬಗ್ಗೆ ಅಪ್ಡೇಟ್ ಆಗಬೇಕು ಎಂದು ಹೇಳಿದರು.
ಕಲಬುರಗಿಯ ತೊಗರಿ ಬೇಳೆಗೆ ಬೇಡಿಕೆ ಇದೆ. ಪೌಷ್ಠಿಕಾಂಶವುಳ್ಳ ನಮ್ಮ ನೆಲದ ಬೇಳೆಗೆ ಪ್ರೋತ್ಸಾಹ ನೀಡಬೇಕು. ಜಂಕ್ ಫುಡ್ ಬಿಟ್ಟು ಜಾಗಿಂಗ್, ಯೋಗ, ಧ್ಯಾನದಂತ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಯುಎನ್‌ಡಿಒಸಿಕೆಇಡಿ ಕಂಪನಿ ಅಧ್ಯಕ್ಷ, ಹಳೇ ವಿದ್ಯಾರ್ಥಿ ರವಿ ಜೋಶಿ ಮಾತನಾಡಿ, ಭಾರತವೂ ಆ ದಿಕ್ಕಿನಲ್ಲಿ ಕಳೆದ ಎರಡು ದಶಕದಿಂದ ಸಾಗುತ್ತಿದೆ. ಅದಕ್ಕೆ ತಕ್ಕಂತೆ ನಾವು ಮುನ್ನಡೆಯಬೇಕು. ಆಧಾರ್, ಯುಪಿಐ ಸೇರಿ ಹಲವು ಸೌಲಭ್ಯಗಳಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖ. ಐದು ಟ್ರಿಲಿಯನ್ ಆರ್ಥಿಕತೆ ದೊಡ್ಡ ಸವಾಲು ಭಾರತ ಹೊಂದಿದ್ದು, ಇದರಿಂದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಎಚ್‌ಕೆಇ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಮಾತನಾಡಿ, ಕೈಗಾರಿಕೆಗಳ ಸವಾಲು ಅರಿಯಬೇಕು. ವಿಶ್ವಾಸದೊಂದಿಗೆ ಸಾಗಬೇಕು. ಪಿಡಿಒ ಕಾಲೇಜಿನಲ್ಲಿ ಎಲ್ಲ ಕೌಶಲ ನೀಡುವ ಕೆಲಸ ಮಾಡಲಾಗುತ್ತಿದೆ. ಸೆಂಟರ್ ಆಫ್ ಎಕ್ಸ್ಲೆನ್ಸಿ, ಎಐ ವಿಭಾಗ ಆರಂಭಿಸಲಾಗಿದೆ. ತಮ್ಮ ಕೋರ್ಸ್ ಜತೆಗೆ ಎಐನಲ್ಲಿನ ಅವಕಾಶಗಳ ಬಗ್ಗೆ ಅರಿತು ಮುಂದುವರಿಯಬೇಕು ಎಂದರು.
ಎಚ್‌ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ್, ನಾಗೇಂದ್ರ ಮಂಠಾಳೆ, ಮಹಾದೇವಪ್ಪ ರಾಂಪುರೆ, ಶರಣಬಸಪ್ಪ ಹರವಾಳ, ಅನೀಲ ಪಟ್ಟಣ, ಅನೀಲ ಮರಗೋಳ, ಡಾ.ಕಿರಣ ದೇಶಮುಖ, ನಿಶಾಂತ ಏಳಿ, ಶಿವಾನಂದ ಮೇಳಕುಂದಿ, ಪ್ರಾಂಶುಪಾಲ ಡಾ.ಎಸ್.ಆರ್.ಮಿಸೆ, ಡಾ.ಎಸ್.ಆರ್.ಹೊಟ್ಟಿ, ಡಾ.ಶ್ರೀದೇವಿ ಸೋಮ, ರವಿಂದ್ರ ಲಟ್ಟೆ, ಬಾಬುರಾವ ಶೇರಿಕಾರ ಇತರರಿದ್ದರು.