

ಕೊಳ್ಳೇಗಾಲ: ಪಟ್ಟಣದ ವಿಸ್ಡಮ್ ಶಾಲೆಯಲ್ಲಿ ಇತ್ತೀಚೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶಾಲೆಯಲ್ಲಿ ವಿವಿಧ ವಿನ್ಯಾಸದ ಶ್ರೀ ಕೃಷ್ಣ ಮತ್ತು ರಾಧೆಯ ಮೂರ್ತಿಗಳನ್ನು ಶೃಂಗರಿಸಿ ಇಡಲಾಗಿತ್ತು. ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಧಾರಿಗಳಾಗಿ ಗಮನೆ ಸೆಳೆದರು. ಈ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಸ್ಡಮ್ ಶಾಲೆಯ ಕಾರ್ಯದರ್ಶಿ ಸುಧಾ, ಮುಖ್ಯ ಶಿಕ್ಷಕಿ ಬ್ರಮರಾಂಭ, ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.