

ಬೇಲೂರು : ರಾಷ್ಟ್ರಧರ್ಮ ಸಂಘಟನೆ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಬೇಲೂರು ಪಟ್ಟಣ ಸಮೀಪದ ವಿಷ್ಣುಸಮುದ್ರ ಕಲ್ಯಾಣಿಯ ಸುತ್ತಮುತ್ತಲೂ ಸ್ವಚ್ಛಗೊಳಿಸಿ, ಗಿಡ ನೆಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಆಚರಿಸಿದರು.
ರಾಷ್ಟ್ರ ಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್ ಕೆಂಚಾಂಬ ಮಾತನಾಡಿ, ವಿಶ್ವಕರ್ಮ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ನಮ್ಮೆಲ್ಲ ಕಾರ್ಯಕರ್ತರೊಂದಿಗೆ ಕಲ್ಯಾಣಿ ಅಕ್ಕಪಕ್ಕದಲ್ಲಿ ಸ್ವಚ್ಛಗೊಳಿಸಿ, ಗಿಡ ನೆಟ್ಟು ಆಚರಿಸುತಿದ್ದೇವೆ. ಇದಕ್ಕೆ ಪ್ರಮುಖವಾಗಿ ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಜನರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಅರಿವು ಮೂಡಿಸಿ ಮಹಾತ್ಮ ಗಾಂಧಿಯವರು ಕಂಡಿದ್ದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರೇರೇಪಿಸಿದ್ದಾರೆ. ಆದ್ದರಿಂದ ಅವರ ಹುಟ್ಟು ಹಬ್ಬವನ್ನು ಈ ಮೂಲಕ ಆಚರಿಸುತಿದ್ದೇವೆ ಎಂದರು.
ಈ ಸಂದರ್ಭ ಶ್ರೀರಾಮ ಸೇನೆ ಹಾಗೂ ರಾಷ್ಟ್ರಧರ್ಮ ಸಂಘಟನೆ ಪದಾಧಿಕಾರಿಗಳಿದ್ದರು.