ವಿಷ್ಣು ಸಹಸ್ರನಾಮ ಪಾರಾಯಣ

27-kolar-2
ಕೋಲಾರದ ಸಾಯಿಬಾಬಾ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಆಯೋಜಿಸಿದ್ದು, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ರವೀಂದ್ರನಾಥ್, ಕಾರ್ಯದರ್ಶಿ ಸತ್ಯಲಕ್ಷ್ಮೀ, ಸಹ ಕಾರ್ಯದರ್ಶಿ ಶೈಲಾ ಬದ್ರಿನಾಥ್
Published on

ಕೋಲಾರ: ಅಧಿಕಮಾಸ ಬಂದಾಗಲೆಲ್ಲ ೨೪ ದಿನ ೨೪ ದೇವಾಲಯಗಳಲ್ಲಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿಕೊಂಡು ಬರಲಾಗುತ್ತಿದೆ ಎಂದು ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ರವೀಂದ್ರನಾಥ್ ತಿಳಿಸಿದರು.
ನಗರದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ವಾಸವಿ ಮಹಿಳಾ ಮಂಡಳಿ ವತಿಯಿಂದ ಲೋಕ ಕಲ್ಯಾಣಾರ್ಥ ಗುರುವಾರ ಆಯೋಜಿಸಿದ್ದ ಹತ್ತನೇ ದಿನದ ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಮಾತನಾಡಿ, ಈ ಬಾರಿ ಅಧಿಕ ಶ್ರಾವಣವಿದ್ದು, ಜು.೧೮ ರಂದು ವಿಷ್ಣು ಸಹಸ್ರನಾಮ ಪ್ರಾರಂಭಿಸಿದ್ದು, ಹತ್ತನೇ ದಿನ ಶ್ರೀಸಾಯಿಬಾಬಾ ಮಂದಿರದಲ್ಲಿ ಪಾರಾಯಣ ಮಾಡುತ್ತಿದ್ದೇವೆ. ಈ ವರ್ಷ ಲೋಕ ಕಲ್ಯಾಣಾರ್ಥ ದೇವರ ಮೊರೆಹೋಗಿದ್ದೇವೆ. ದೇಶ ಸಮೃದ್ಧವಾಗಿರಲಿ ಎಂಬುದು ಇದರ ಉದ್ದೇಶ ಎಂದರು.
ವಾಸವಿ ಮಹಿಳಾ ಮಂಡಳಿ ಕಾರ್ಯದರ್ಶಿ ಸತ್ಯಲಕ್ಷ್ಮೀ, ಸಹ ಕಾರ್ಯದರ್ಶಿ ಶೈಲಾ ಬದ್ರಿನಾಥ್, ಉಪಾಧ್ಯಕ್ಷೆ ಶ್ರೀದೇವಿ ಗುಪ್ತ, ಸದಸ್ಯರಾದ ವಿನುತಾ ಕೃಷ್ಣ, ವಾಣಿ ಬಾಲಾಜಿ, ವಿಜಯಲಕ್ಷ್ಮೀ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net