ವಿಷ್ಣು ದೇಗುಲದಲ್ಲಿ ಪೂಜಾ ಕೈಂಕರ್ಯ

09.-kkr2(9-23
ಕಿಕ್ಕೇರಿ ಹೋಬಳಿಯ ಗೂಡೇಹೊಸಹಳ್ಳಿ ಗ್ರಾಮದ ವೆಂಕಟರಮಣಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
Published on

ಕಿಕ್ಕೇರಿ: ಶ್ರಾವಣ ಮಾಸದ ಕೊನೆಯ ಶನಿವಾರ ಹಿನ್ನೆಲೆಯಲ್ಲಿ ಹೋಬಳಿಯಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.

ಪಟ್ಟಣದ ನರಸಿಂಹಸ್ವಾಮಿ ದೇಗುಲ, ಕೋಟೆ ಆಂಜನೇಯ, ಕೋಟೆ ಗಣಪತಿ, ಗದ್ದೆಹೊಸೂರುವಿನ ಅಭಯ ವೆಂಕಟರಮಣಸ್ವಾಮಿ, ಗೂಡೆಹೊಸಹಳ್ಳಿ ವೆಂಕಟರಮಣಸ್ವಾಮಿ, ಮಂದಗೆರೆಯ ಆಂಜನೇಯ, ಮಾದಾಪುರದ ಆಂಜನೇಯ, ಕಾಳೇನಹಳ್ಳಿ ಮಾರುತಿ, ಡಾಣನಹಳ್ಳಿ ಆಂಜನೇಯ ಸೇರಿದಂತೆ ಮತ್ತಿತರ ದೇಗುಲಗಳಿಗೆ ಬೆಳಗ್ಗಿನಿಂದಲೇ ಭಕ್ತರು ತೆರಳಿ ಪೂಜೆ ಸಲ್ಲಿಸಿದರು. ಇದರೊಂದಿಗೆ ಪಂಚಾಮೃತ ಸೇರಿ ಮತ್ತಿತರ ಅಭಿಷೇಕಗಳು ನಡೆದವು. ದೇವರನ್ನು ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಿದ ಬಳಿಕ ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗ ಮಾಡಲಾಯಿತು.

ಪಟ್ಟಣದಲ್ಲಿ ಪುಟಾಣಿ ಮಕ್ಕಳೂ ಗೋವಿಂದನಾಮ ಸ್ಮರಣೆ ಮಾಡಿದರು. ಮಕ್ಕಳು ಹಣೆಗೆ ಮೂರು ನಾಮ ಹಾಕಿಕೊಂಡು ಕೈಯಲ್ಲಿ ಚಿಕ್ಕ ಚೊಂಬು-ಲೋಟ ಹಿಡಿದು ಗೋವಿಂದನನ್ನು ಸ್ಮರಿಸುತ್ತಿದ್ದ ದೃಶ್ಯ ಕಂಡು ಬಂತು. ಮನೆ ಮನೆಗೆ ತೆರಳಿ ಕೊಟ್ಟ ರಾಗಿ, ಅಕ್ಕಿ, ಹಿಟ್ಟನ್ನು ಬೂನಾಸಿಗೆ ತುಂಬಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net