ವಿಷಸರ್ಪಗಳ ತಾಣ ಉದ್ಯಾನವನ : ಗುಡಿಬಂಡೆಯ 11ನೇ ವಾರ್ಡ್​ನಲ್ಲಿರುವ ಪಾರ್ಕ್​, ಪಾರ್ಥೇನಿಯಂ ಗಿಡಗಳಿಂದ ಸಮಸ್ಯೆ

1
Published on

ನಿಚ್ಚನಬಂಡಹಳ್ಳಿ ಎನ್​.ವಿ.ವೆಂಕಟೇಶ್​ ಗುಡಿಬಂಡೆ  ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿಮಿರ್ಸಿರುವ ಉದ್ಯಾನವನದಲ್ಲಿ ಈಗ ಪಾರ್ಥೇನಿಯಂ ಗಿಡಗಳು ಬೆಳೆದು ವಿಷಸರ್ಪಗಳ ತಾಣವಾಗಿ ಮಾರ್ಪಾಟಾಗಿದೆ. ಗುಡಿಬಂಡೆ ಪಟ್ಟಣದ 11ನೇ ವಾರ್ಡ್​ನ ಪೊಲೀಸ್​ ಠಾಣೆ ಹಿಂಭಾಗದ ನಾರೇಪ್ಪ ಬಡವಾಣೆಯಲ್ಲಿ ಪಟ್ಟಣ ಪಂಚಾಯಿತಿಯ 20 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಸ್ವಾತಂತ್ರ ಹೋರಾಟಗಾರ ಜಿ.ಪಿ.ಆವುಲಕೊಂಡಪ್ಪ ಉದ್ಯಾನವನ್ನು ಎರಡು ವರ್ಷಗಳ ಹಿಂದೆ ನಿಮಿರ್ಸಲಾಗಿದೆ. ಈ ಉದ್ಯಾನವದಲ್ಲಿ ಮಕ್ಕಳು ಆಟ ಆಡಲು ಮತ್ತು ಹಿರಿಯ ನಾಗರಿಕರ ವ್ಯಾಯಾಮಕ್ಕೆ ಅನುಕೂಲವಾಗುವ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಸಲಕರಣೆ ಸಂರ್ಪೂಣ ಕಳಪೆಯಾಗಿದೆ. ಈ ಸಲಕರಣೆಗಳು ಅಳವಡಿಸಿದ ಕೆಲವು ತಿಂಗಳುಗಳು ಮಾತ್ರ ಪಟ್ಟಣದ ಹಲವು ವಾರ್ಡ್​ಗಳಿಂದ ಈ ಉದ್ಯಾನವನಕ್ಕೆ ಬಂದು ತಮ್ಮ ಮಕ್ಕಳನ್ನು ಆಟವಾಡಿಸುತ್ತಾ ಜತೆಗೆ ತಾವು ಸಹ ವಾಕಿಂಗ್​ ಮಾಡಿಕೊಂಡು ಹೋಗುತ್ತಿದ್ದರು. ಗುತ್ತಿಗೆದಾರನ ತೀವ್ರ ನಿರ್ಲಕ್ಷವಹಿಸಿದ್ದು, ಉದ್ಯಾನವನ್ನು ಸರಿಯಾಗಿ ನಿರ್ವಹಿಸದೇ ಉದ್ಯಾನವನದ ತುಂಬಾ ಪಾಥೇನಿಯಂ ಗಿಡಗಳು ಬೆಳೆದು ನಿಂತಿವೆ ಇದರ ಜತೆಗೆ ವಿಷ ಸರ್ಪಗಳು ಸೇರಿಕೊಂಡಿದ್ದು, ಈಗ ಜನರು ಉದ್ಯಾನವನದ ಒಳಗಡೆ ಹೋಗಲು ಮತ್ತು ತಮ್ಮ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದಾರೆ. ರಾತ್ರಿ ವೇಳೆ ಈ ಉದ್ಯಾನವನ ಕುಡುಕರ ಅಡ್ಡವಾಗಿ ಮಾರ್ಪಾಡಾಗಿದ್ದು, ಕುಡಿದು ಬಟೇಲ್​ಗಳನ್ನು ಅಲ್ಲೆ ಒಡೆದುಹಾಕಿ ಸಾರ್ವಜನಿಕರಿಗೆ ಅನಾನುಕೂಲ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಗಮನ ಕೊಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಹ ಉದ್ಯಾನವನವನ್ನು ಸರಿಯಾಗಿ ನಿರ್ವಹಣೆ ಮಾಡದ ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸದೇ ನಿರ್ಲಕ್ಷ ವಹಿಸುತ್ತಿರುವುದು ಅಧಿಕಾರಿಗಳ ಮತ್ತು ಗುತ್ತಿಗೆದಾರನ ಒಳ ಒಪ್ಪಂದಗಳು ಇವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿದೆ.

ಪಟ್ಟಣದ 11ನೇ ವಾರ್ಡ್​ನಲ್ಲಿ ನಿಮಿರ್ಸಿರುವ ಉದ್ಯಾನವನ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಬೇಜವ್ದಾರಿಯಿಂದ ಸ್ವಚ್ಛತೆ ಇಲ್ಲದೆ ಕೊರಗುತ್ತಿದೆ, ನೂತನವಾಗಿ ನಿಮಿರ್ಸಿದಾಗ ಸಾರ್ವಜನಿಕರು ಅಲ್ಲಿಗೆ ಹೋಗಿ ವಾಕಿಂಗ್​ ಮಾಡುತ್ತಾ ಕಾಲ ಕಳೆಯುತ್ತುದ್ದು. ಆದರೆ ಕೆಲ ತಿಂಗಳಿಂದ ಉದ್ಯಾನವನದ ತುಂಬಾ ಪಾರ್ಥೇನಿಯಂ ಗಿಡ ಬೆಳೆದು ಹಾವುಗಳು ಸೇರಿಕೊಂಡಿವೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ಇದ್ದಾರೆ. ಕೂಡಲೇ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸ್ವಚ್ಛತೆ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಪದ್ಮಾವತಿ, ಪಪಂ ನಾಮಿನಿ ಸದಸ್ಯೆ, ಗುಡಿಬಂಡೆ *** ಉದ್ಯಾನವನ ನಿಮಿರ್ಸಿದ ನಂತರ 2 ವರ್ಷಗಳ ಕಾಲ ಗುತ್ತಿಗೆದಾರನು ಅದನ್ನು ನಿರ್ವಹಣೆ ಮಾಡಬೇಕು. ಆದರೆ ಗುತ್ತಿಗೆದಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಸರಿಪಡಿಸುವಂತೆ ಗುತ್ತಿಗೆದಾರನಿಗೆ ಸೂಚಿಸುತ್ತೇವೆ. ಒಂದು ವೇಳೆ ಸರಿಪಡಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರಾಜಶೇಖರ್​, ಪ.ಪಂ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net